ಡಿ. 10ರಂದು ಕಾರ್ಕಳದ ರಾಜಾಪುರ ಸಾರಸ್ವತ ಸೊಸೈಟಿಯ 8ನೇ ಶಾಖೆ ಪೆರ್ಡೂರಲ್ಲಿ ಶುಭಾರಂಭ

Update: 2022-12-08 17:12 GMT

ಕಾರ್ಕಳ: ಕಾರ್ಕಳ ಜೋಡುರಸ್ತೆ ಪ್ರಧಾನ ಕಚೇರಿ ಹೊಂದಿರುವ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ತನ್ನ 8ನೇ ಶಾಖೆಯು ಉಡುಪಿ ತಾಲೂಕಿನ ಪೆರ್ಡೂರಿನಲ್ಲಿ ಡಿ. 10ರಂದು ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವರಾದ  ಸುನಿಲ್ ಕುಮಾರ್‌ರವರು ಉದ್ಘಾಟಿಸಲಿರುವರು ಎಂದು ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು ಅವರು ಪ್ರತಿಕಾಗೊಷ್ಠಿಯಲ್ಲಿ ತಿಳಿಸಿದರು.

ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ  ದೇವು ಪೂಜಾರಿ ಹೊಸಂಗಡಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ  ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಕ್ಷ್ಮೀನಾರಾಯಣ ಜಿ. ಎನ್., ಪೆರ್ಡೂರು ಬಂಟರ ಸೌರ್ಹಾದ ಸಹಕಾರಿ ನಿಯಮಿತದ ಅಧ್ಯಕ್ಷರಾದ  ಕೆ. ಶಾಂತರಾಮ ಸೂಡ, ಪೆರ್ಡೂರು ಕುಂಬಾರರ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು, ಮಂಗಳೂರು ಎಸ್.ಕೆ.ಜಿ.ಐ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ  ಉಪೇಂದ್ರ ಆಚಾರ್ಯ, ಪೆರ್ಡೂರಿನ ಕಟ್ಟಡ ಮಾಲೀಕರಾದ ವಸಂತ ಕುಮಾರ್ ಶೆಟ್ಟಿ ಹೆರ್ಡೆಬೀಡು ಇವರು ಭಾಗಹಿಸಲಿರುವರು.

1996ರಲ್ಲಿ ಪ್ರಾರಂಭವಾದ ಈ ಸಹಕಾರಿಯು ಕಳೆದ 26 ವರ್ಷಗಳಿಂದ ನಿರಂತರ ಪ್ರಗತಿ ಪಥದತ್ತ ಮುನ್ನಡೆದು ಇದೀಗ 7 ಶಾಖೆಗಳನ್ನು ಹೊಂದಿದ್ದು ಈ ಪೈಕಿ 4 ಶಾಖೆಗಳು ಸ್ವಂತ ಕಟ್ಟಡವನ್ನು ಹೊಂದಿ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. 2006ರಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಯ ಜೋಡುರಸ್ತೆಯಲ್ಲಿ 17 ಸೆಂಟ್ಸ್ ನಿವೇಶನವನ್ನು ಖರೀದಿಸಿ 12 ಸಾವಿರ ಚದರ ಅಡಿಯ ವಿಸ್ತೀರ್ಣದ ಸುಸಜ್ಜಿತವಾದ ಪ್ರಧಾನ ಕಚೇರಿ ಹಾಗೂ ಸಭಾ ಭವನವನ್ನು ಹೊಂದಿರುತ್ತದೆ. ಕಳೆದ ಸಾಲಿನಲ್ಲಿ ಪ್ರಧಾನ ಕಚೇರಿ ಸಾರಸ್ವತ ಸೌಧದ ಬದಿಯ ಸುಮಾರು 5 ಕೋಟಿ ಬೆಲೆಬಾಳುವ 62 ಸೆಂಟ್ಸ್ ಸ್ಥಳವನ್ನು ಖರೀದಿಸಲಾಗಿದ್ದು ಮುಂದಿನ ದಿನಗಳಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವ ಯೋಜನೆಯನ್ನು ಆಡಳಿತ ಮಂಡಳಿ ಹೊಂದಿದೆ. ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಶೀಘ್ರ ಸೇವೆ ಒದಗಿಸಲು ಉತ್ಕೃಷ್ಟ ಗುಣಮಟ್ಟದ ತಂತ್ರಜ್ಞಾನ ಅಳವಡಿಕೆ ದಕ್ಷ ಕ್ರಿಯಶೀಲ ಆಡಳಿತಮಂಡಳಿ ಹಾಗೂ ಶಿಸ್ತುಬದ್ಧ ಪ್ರಾಮಾಣಿಕ ಸಿಬ್ಬಂದಿ ವರ್ಗದೊಂದಿಗೆ ಅಲ್ಪಾವಧಿಯಲ್ಲಿ ಜಿಲ್ಲೆಯ ಪ್ರತಿಷ್ಠಿತ ಸೊಸೈಟಿಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ.

ಸೊಸೈಟಿಯು 4.30 ಕೋಟಿ ಪಾಲು ಬಂಡವಾಳ, 145.50 ಕೋಟಿ ಠೇವಣಿ ಹೊಂದಿ, 118.54 ಕೋಟಿ ಸಾಲವನ್ನು ನೀಡಿದೆ, 2021-22 ಆರ್ಥಿಕ ವರ್ಷದಲ್ಲಿ 760 ಕೋಟಿ ವ್ಯವಹಾರವನ್ನು ನಡೆಸಿ 3.11 ಕೋಟಿ ನಿವ್ವಳ ಲಾಭವನ್ನು ಗಳಿಸಿರುತ್ತದೆ. ಸೊಸೈಟಿಯ ದುಡಿಮೆ ಬಂಡವಾಳವು ರೂ. 172.03 ಕೋಟಿ ಮೀರಿರುತ್ತದ್ದೆ. ಕಳೆದ 22 ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ “ಎ” ಶ್ರೇಣಿಯ ಗೌರವ ಪ್ರಾಪ್ತಿಯಾಗಿದ್ದು ಆರ್ಥಿಕ ಸ್ಥಿರತೆಗೆ ಸಾಕ್ಷಿಯಾಗಿದೆ. 2022-23ನೇ ಆರ್ಥಿಕ ವರ್ಷದಲ್ಲಿ ಒಂದು ಸಾವಿರ ಕೋಟಿ ವ್ಯವಹಾರ ನಡೆಸಿ 4 ಕೋಟಿಗೂ ಮೀರಿ ನಿವ್ವಳ ಲಾಭ ಗಳಿಸಿವ ನಿರೀಕ್ಷೆಯಲ್ಲಿದ್ದೇವೆ.

ಕೇವಲ ಆರ್ಥಿಕ ವ್ಯವಹಾರಕ್ಕೆ ಸೀಮಿತವಾಗಿರದೆ ಸಾರ್ವಜನಿಕ ಸೇವೆಯಲ್ಲಿಯೂ ಮುಂಚುಣಿಯಲ್ಲಿದ್ದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅದ್ಯತೆ ನೀಡುತ್ತಿದ್ದೇವೆ. ಕಳೆದ 2 ವರ್ಷದಲ್ಲಿ ಜನತೆಯನ್ನು ಕಾಡಿದ ಕೋವಿಡ್ 19ರ ಸಮಸ್ಯೆಗೆ ನಮ್ಮ ಸಂಸ್ಥೆಯಿಂದ ಆರೋಗ್ಯ ಇಲಾಖೆಗೆ ಸುಮಾರು 12 ಲಕ್ಷಕ್ಕೂ ಮೀರಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಾರ್ಕಳ ತಾಲೂಕಿನ ಪ್ರಾಥಮಿಕ ಶಾಲೆಯ 15,400 ಮಕ್ಕಳಿಗೆ ರೂ. 34 ಲಕ್ಷ ವೆಚ್ಚದಲ್ಲಿ ಸ್ಕೂಲ್ ಬ್ಯಾಗ್ ವಿತರಿಸಿದ್ದು ಹಾಗೂ ಶಾಲೆಗಳಲ್ಲಿ ನಡೆಯುವ ವಿವಿಧ ಕಾರಕ್ರಮಗಳಿಗೆ ಆರ್ಥಿಕ ನೇರವು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಾಧಕ ವಿದ್ಯಾರ್ಥಿಗಳಿಗೆ ನಗದು ಪುರಸ್ಕರ ಮತ್ತು ಅನಾರೋಗ್ಯಕ್ಕೆ ಒಳಗಾದ ಸದಸ್ಯರಿಗೆ ಆರ್ಥಿಕ ನೆರವು, ಸಂಘ ಸಂಸ್ಥೆಗಳ ಸಮಾಜಮುಖಿ ಕಾಠ್ಯಕ್ರಮಗಳಿಗೆ ಪ್ರಯೋಜಕತ್ವ ಹೀಗೆ ಹತ್ತು ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದ್ದೆ.

ಸಹಕಾರಿಯ ನಿರಂತರ ಪ್ರಗತಿ, ಸಾರ್ವಜನಿಕ ಸೇವೆಯನ್ನು ಗುರುತಿಸಿ ಸಹಕಾರ ಇಲಾಖೆಯು ಕಳೆದ 7 ವರ್ಷಗಳಲ್ಲಿ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ 5 ಬಾರಿ ರಾಜ್ಯದ ಅತ್ಯುತ್ತಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಸೊಸೈಟಿಯ ಅಧ್ಯಕ್ಷರಿಗೆ 2017ರಲ್ಲಿ ರಾಜ್ಯ ಮಟ್ಟದ ಉತ್ತಮ ಸಹಕಾರಿ ಪ್ರಶಸ್ತಿ ಒಲಿದು ಬಂದಿದು ಸೊಸೈಟಿಯ ನಿರಂತರ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿರುತ್ತದೆ. ಇದೀಗ ಇತಿಹಾಸ ಪ್ರಸಿದ್ಧ ಪೆರ್ಡೂರು ಕದಳೀಪ್ರಿಯ  ಅನಂತಪದ್ಮನಾಭ ದೇವರ ಕ್ಷೇತ್ರದಲ್ಲಿ ತನ್ನ 8ನೇ ಶಾಖೆಯನ್ನು ಪ್ರಾರಂಭಿಸುತ್ತಿದ್ದು ಈ ಭಾಗದ ಜನರ ಆರ್ಥಿಕ ಅವಶ್ಯಕತೆಗಳಿಗೆ ಸ್ಪಂದಿಸಿ ಸೇವಾ ಮನೋಭಾವದೊಂದಿ ಜನಸ್ನೇಹಿಯಾಗಿ ನಮ್ಮ ಸೊಸೈಟಿಯು ಕಾರ್ಯನಿರ್ವಹಿಸಲಿದೆ ಎಂದು ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭುರವರು ಪ್ರಧಾನ ಕಚೇರಿ ಜೋಡುರಸ್ತೆಯ ಸಾರಸ್ವತ ಸೌಧದಲ್ಲಿ ನಡೆದ ಪ್ರತಿಕಾಗೊಷ್ಠಿಯಲ್ಲಿ ತಿಳಿಸಿದರು.

Similar News