ದೇರಳಕಟ್ಟೆ: ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2022-12-08 18:12 GMT

ದೇರಳಕಟ್ಟೆ: ಬದ್ರಿಯಾ  ಜುಮಾ ಮಸೀದಿ  ಇದರ ವಾರ್ಷಿಕ ಮಹಾ ಸಭೆಯು ಹಾಜಿ ಅಬೂಬಕ್ಕರ್ ನಾಟೆಕ್ಕಲ್ ಅವರ ಅದ್ಯಕ್ಷತೆಯಲ್ಲಿ ನಡೆಯಿತು. ಸದರ್ ಮುಅಲ್ಲಿಂ ಅಬ್ದುಲ್ಲಾ ಫೈಝಿ ದುಆ ನೆರವೇರಿಸಿದರು.

ಸಭೆಯಲ್ಲಿ 2022-23 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಆರ್ ಅಹ್ಮದ್ ಸೇಟ್, ಉಪಾಧ್ಯಕ್ಷರಾಗಿ ಹಾಜಿ ಅಬುಸ್ವಾಲಿಹ್ ಡಿ, ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಎಂ.ಎಚ್, ಜೊತೆ ಕಾರ್ಯದರ್ಶಿಗಳಾಗಿ ರಶೀದ್ ಡಿ.ಎಂ, ಅಬ್ದುಲ್ ಖಾದರ್.ಐ, ಕೋಶಾಧಿಕಾರಿ ಯಾಗಿ ಎಂ.ಎಚ್ ಹಸನ್ ಬಾವು, ಲೆಕ್ಕ ಪರಿಶೋಧಕರಾಗಿ ಹಾಜಿ ಅಬ್ದುಲ್ ಅಝೀಝ್ ಹಾಗೂ 21 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Similar News