ಹಿರಾ ಮಹಿಳಾ ಪದವಿ ಕಾಲೇಜು: 'ಎಲಿಝಿಯನ್-2022' ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Update: 2022-12-09 10:48 GMT

ಉಳ್ಳಾಲ, ಡಿ.9: ಬಬ್ಬುಕಟ್ಟೆಯ ಹಿರಾ ಮಹಿಳಾ ಪದವಿ ಕಾಲೇಜು ವತಿಯಿಂದ ಡಿ.21ರಂದು ಅಂತರ ಕಾಲೇಜು ಮಟ್ಟದ ಪಿಯುಸಿ ವಿದ್ಯಾರ್ಥಿಗಳಿಗೆ ಹಿರಾ ಕಾಲೇಜು ಸಭಾಂಗಣದಲ್ಲಿ  ಹಮ್ಮಿಕೊಂಡಿರುವ ಜ್ಞಾನೋತ್ಸವ -2022 (ಎಲಿಝಿಯನ್ 2022) ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ಹಿರಾ ಕಾಲೇಜಿನಲ್ಲಿ ನಡೆಯಿತು.

 ಶಾಂತಿ ಎಜುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಕೆ.ಎಂ.ಶರೀಫ್ ಪೋಸ್ಟರ್ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಹಿರಾ ಶಿಕ್ಷಣ ಸಂಸ್ಥೆಯ ಸಂಚಾಲಕ ರಹ್ಮತುಲ್ಲಾ, ಕಲಿಕೆಯ ಜೊತೆಗೆ ಜೀವನದ ಕಲಿಕೆಯನ್ನು ಕಲಿಸಿ ಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಈ ಕಾರ್ಯಕ್ರಮದಲ್ಲಿ ದ.ಕ. ಮತ್ತು ಕೇರಳ ಕಾಸರಗೋಡು ಭಾಗದ 60 ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ, ಇದರಲ್ಲಿ 10 ವಿಭಾಗದ  ಸ್ಪರ್ಧೆಗಳು ನಡೆಯಲಿವೆ ಎಂದರು.

ಶಾಂತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ.ಎಚ್.ಮಹ್ಮೂದ್, ಉಪಾಧ್ಯಕ್ಷ ಕೆ.ಎಂ.ಅಶ್ರಫ್, ಕಾರ್ಯದರ್ಶಿ ಅಬ್ದುಲ್ ಕರೀಂ, ಟ್ರಸ್ಟಿಗಳಾದ ಸಮೀರ, ನಸೀರುದ್ದೀನ್, ಖಾದರ್, ಹಸನ್ ಪಿಲಾರ್, ಇಲ್ಯಾಸ್, ಉಮರ್ ಬಾವ, ಆಡಳಿತಾಧಿಕಾರಿ ಝಾಕೀರ್ ಹುಸೈನ್ ಹಾಗೂ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಹಿರಾ ಪ್ರಾಂಶುಪಾಲೆ ಭಗೀರಥಿ ಮತ್ತು ಉಪನ್ಯಾಸಕಿ ಎಲೀಝ ಫೆರಾವೋ ಮತ್ತು ವಿದ್ಯಾರ್ಥಿನಿ ಫಹೀಮ ಮುಸ್ತಾಕ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿನಿ ಹಲೀಮಾ ಅಫ್ರೀನ  ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು, ಹಲೀಮಾ ಝಿಕ್ರಾ ಕಿರಾಅತ್ ಪಠಿಸಿದರು.

Similar News