ಹರಿಪ್ರಸಾದ ಕಾರಂತರಿಗೆ ಶ್ರೀಕದ್ರಿ ಪ್ರಶಸ್ತಿ

Update: 2022-12-09 17:28 GMT

ಮಂಗಳೂರು : ಪ್ರತಿವರ್ಷ ಕಟೀಲು ಮೇಳದ ಕಲಾವಿದರಿಗೆ ನೀಡಲಾಗುವ ಶ್ರೀಕದ್ರಿ ಪ್ರಶಸ್ತಿಗೆ ಕಟೀಲು ಮೇಳದ ಭಾಗವತ ಹರಿ ಪ್ರಸಾದ ಕಾರಂತ ಆಯ್ಕೆಯಾಗಿದ್ದಾರೆ.

ಡಿ.11ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ನಡೆಯುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದ ಸೇವೆ ಆಟದ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸೇವಾಕರ್ತ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ತಿಳಿಸಿದ್ದಾರೆ.

ವಕೀಲ ವೃತ್ತಿ ಮಾಡಿಕೊಂಡು, ಪ್ರವೃತ್ತಿಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಕಲಾಮಾತೆಯ ಸೇವೆ ಮಾಡುತ್ತಿರುವ ಕಾರಂತರು ಯಕ್ಷಗಾನ ಕಲಾವಿದ ಸರಪಾಡಿ ಶಂಕರನಾರಾಯಣ ಕಾರಂತ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಹಿಮ್ಮೇಳದ ಎಲ್ಲ ಪ್ರಾಕಾರ ಗಳನ್ನು ಅಭ್ಯಸಿಸಿ, ಶಿವರಾಮ ಪಾಂಬೂರು ಮತ್ತು ಡಾ.ದಿನಕರ ಪಚ್ಚನಾಡಿ ಅವರಿಂದ ನಾಟ್ಯ ತರಬೇತಿ ಪಡೆದರು. ವೇಷಧಾರಿಯಾಗಿ ಯಕ್ಷ ಲೋಕಕ್ಕೆ ಕಾಲಿಟ್ಟು ಬಳಿಕ ತಂದೆಯ ಸಲಹೆಯಂತೆ ಭಾಗವತಿಕೆ ಅಭ್ಯಾಸ ಮಾಡಿದ್ದರು ಎಂದು ಪ್ರಕಟನೆ ತಿಳಿಸಿದೆ.

Similar News