ಬೆಂಗಳೂರು: ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಲು ಡಿ.12ರ ವರೆಗೆ ಅವಕಾಶ

Update: 2022-12-09 18:27 GMT

ಬೆಂಗಳೂರು, ಡಿ.9: ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಡಿ.12ರೊಳಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಡೌನ್‍ಲೋಡ್ ಮಾಡಿಕೊಂಡ ಅರ್ಜಿಗಳ ಜೊತೆಯಲ್ಲಿ ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರಗಳನ್ನು ಡಿ.15ರೊಳಗೆ ಸಲ್ಲಿಸಬೇಕು. ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು 16ರಂದು ಪ್ರಕಟಿಸಲಿದ್ದು,  ಆಫ್‍ಲೈನ್ ಮುಖಾಂತರ ವಿಜ್ಞಾನ, ಕಲಾ, ಶಿಕ್ಷಣ  ಮತ್ತು ವಾಣಿಜ್ಯ ವಿಷಯಗಳ ಪ್ರವೇಶ ಪ್ರಕ್ರಿಯೆಯನ್ನು ಡಿ.20ರಂದು ನಡೆಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಮೊದಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹಿಂದಿನ ಅಧಿಸೂಚನೆಗೆ ವಿರುದ್ದವಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಮತ್ತು ಕೌನ್ಸೆಲಿಂಗ್‍ಗೆ ಹಾಜರಾಗದ, ಮೊದಲೇ ಸೀಟುಗಳನ್ನು ನೀಡದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ವಿವಿಯ ಕುಲಪತಿಗಳು ತಿಳಿಸಿದ್ದಾರೆ.

Similar News