×
Ad

​ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿಗೆ ಭುವನಾ ಹಿರೇಮಠ ಆಯ್ಕೆ

Update: 2022-12-10 23:20 IST

ಬೆಂಗಳೂರು, ಡಿ.10: ಪ್ರಸಕ್ತ ಸಾಲಿನ ಡಾ.ಡಿ.ಎಸ್ ಕರ್ಕಿ ಕಾವ್ಯ ಪ್ರಶಸ್ತಿಗೆ ಕವಯಿತ್ರಿ ಭುವನಾ ಹಿರೇಮಠ ಅವರ ‘ಮತ್ತೆ ಮತ್ತೆ ಮತ್ರ್ಯಕ್ಕಿಳಿಯುತ್ತೇನೆ’ ಎನ್ನುವ ಕವನ ಸಂಕಲನ ಆಯ್ಕೆಯಾಗಿದೆ ಎಂದು ಕರ್ಕಿ ಪ್ರತಿಷ್ಠಾನ ಟ್ರಸ್ಟ್‍ನ ಕಾರ್ಯದರ್ಶಿ ಪ್ರೊ. ಗಿರೀಶ್ ಕರ್ಕಿ ತಿಳಿಸಿದ್ದಾರೆ.

ಡಿ.17ರಂದು ಬೆಳಗಾವಿಯಲ್ಲಿ ಕರ್ಕಿಯವರ 115ನೆ ಜನ್ಮದಿನದ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭುವನಾ ಹಿರೇಮಠರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Similar News