ಸಿಬಿಎಸ್‍ಇ ಪರೀಕ್ಷೆ ಯಾವಾಗ ? ಇಲ್ಲಿದೆ ಸಮಗ್ರ ಮಾಹಿತಿ...

Update: 2022-12-11 02:42 GMT

ಮುಂಬೈ: ಸಿಬಿಎಸ್‍ಇ 10ನೇ ಮತ್ತು 12ನೇ ತರಗತಿಗಳ ಅಂತಿಮ ಪರೀಕ್ಷೆ ಮುಂದಿನ ವರ್ಷದ ಫೆಬ್ರವರಿ 15ರಿಂದ ಆರಂಭವಾಗಲಿದೆ. 2023ರ ಜನವರಿ 1ರಿಂದ ಪ್ರಾಕ್ಟಿಕಲ್ ಪರೀಕ್ಷೆಗಳು ಅರಂಭವಾಗಲಿವೆ ಎಂದು ಮಂಡಳಿ ಪ್ರಕಟಿಸಿದೆ.

ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ವಿಷಯಗಳು ಮತ್ತು ಲಿಖಿತ ಪರೀಕ್ಷೆ, ಪ್ರಾಕ್ಟಿಕಲ್/ಪ್ರಾಜೆಕ್ಟ್‌ಗಳು ಹಾಗೂ ಆಂತರಿಕ ಮೌಲ್ಯ ಮಾಪನಕ್ಕೆ ನಿಗದಿಪಡಿಸಿದ ಅಂಕಗಳ ವಿವರಗಳು cbse.gov.in ನಲ್ಲಿ ಲಭ್ಯ ಇವೆ.

ಪ್ರಾಕ್ಟಿಕಲ್ ಪರೀಕ್ಷೆಗಳಿಗಾಗಿ ಪಠ್ಯಕ್ರಮವನ್ನು 2023ರ ಜನವರಿ 1ರ ಒಳಗಾಗಿ ಪೂರ್ಣಗೊಳಿಸುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ. 12ನೇ ತರಗತಿಯ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಸಿಬಿಎಸ್‍ಇ ಮಂಡಳಿ ನೇಮಕ ಮಾಡಿದ ಬಾಹ್ಯ ಪರೀಕ್ಷಕರು ನಡೆಸಲಿದ್ದಾರೆ. ಹತ್ತನೇ ತರಗತಿಯ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಆಂತರಿಕ ಪರೀಕ್ಷಕರೇ ನಡೆಸುತ್ತಾರೆ.

ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕದ ಕಾರಣ ಸಿಬಿಎಸ್‍ಇ ಎರಡು ಪರೀಕ್ಷೆಗಳನ್ನು ನಡೆಸಿತ್ತು. ಆದರೆ 2022-23ರ ಪರೀಕ್ಷೆಗಳು ಕೋವಿಡ್ ಪೂರ್ವ ವಿಧಾನದಲ್ಲೇ ನಡೆಯಲಿವೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಐಸಿಎಸ್‍ಇ 10ನೇ ತರಗತಿ ಪರೀಕ್ಷೆಗಳು ಫೆಬ್ರವರಿ 27ರಿಂದ ಮಾರ್ಚ್ 29ರವರೆಗೆ ನಡೆಯಲಿವೆ. 12ನೇ ತರಗತಿ ಐಎಸ್‍ಸಿ ಪರೀಕ್ಷೆಗಳು ಫೆಬ್ರವರಿ 13ರಿಂದ ಮಾರ್ಚ್ 31ರವರೆಗೆ ನಡೆಯಲಿದೆ. ಪರೀಕ್ಷೆಯ ವೇಳಾಪಟ್ಟಿಗಳು cisce.org.in ನಲ್ಲಿ ಲಭ್ಯ ಎಂದು timesofindia.com ವರದಿ ಮಾಡಿದೆ.

Similar News