ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಪ್ರದರ್ಶನ ಆರೋಪ: ಉರ್ಫಿ ಜಾವೇದ್ ವಿರುದ್ಧ ದೂರು

Update: 2022-12-12 07:22 GMT

ಮುಂಬೈ: ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾಮಾಜಿಕ ಮಾ‍ಧ್ಯಮಗಳಲ್ಲಿ ಕಾನೂನು ಬಾಹಿರ ಹಾಗೂ ಅಶ್ಲೀಲ ಚಟುವಟಿಕೆಗಳನ್ನು ಪ್ರದರ್ಶಿಸುತ‍್ತಿದ್ದಾರೆ ಎಂದು ಆರೋಪಿಸಿ, ಬಿಗ್ ಬಾಸ್ OTT ಸ್ಪರ್ಧಿ ಉರ್ಫಿ ಜಾವೇದ್ ವಿರುದ್ಧ ಅಂಧೇರಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, “ಈ ಕುರಿತು ವಕೀಲ ಅಲಿ ಕಾಶಿಫ್ ಖಾನ್ ದೇಶ್‍ಮುಖ್ ಎಂಬವರು ಲಿಖಿತ ದೂರು ಸಲ್ಲಿಸಿದ್ದಾರೆ. ಎರಡು ದಿನಗಳ ಹಿಂದೆ ನಾವು ಈ ದೂರನ್ನು ಸ್ವೀಕರಿಸಿದ್ದೇವೆ” ಎಂದು ತಿಳಿಸಿದ್ದಾರೆ

Similar News