ಬೆಂಗಳೂರಿನಲ್ಲೂ ಫಿಫಾ ಫುಟ್ಬಾಲ್ ಹವಾ: ಅಂಗಡಿಗಳ ವ್ಯಾಪಾರ ವಾಹಿವಾಟು ಅವಧಿ ವಿಸ್ತರಣೆ ಮಾಡಿ ಆದೇಶ
Update: 2022-12-13 20:46 IST
ಬೆಂಗಳೂರು, ಡಿ.23: ರಾಜಧಾನಿ ಬೆಂಗಳೂರಿಗೂ ಫಿಫಾ ಫುಟ್ಬಾಲ್ (fifa world cup 2022) ಸೆಮಿಫೈನಲ್ ಬಿಸಿ ತಟ್ಟಿದ್ದು, ರಾತ್ರಿ ವೇಳೆಯ ಅಂಗಡಿಗಳ ವ್ಯಾಪಾರ ವಾಹಿವಾಟು ಸಮಯ ವಿಸ್ತರಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಡಿ.14ರಿಂದ ಎರಡು ದಿನಗಳ ಕಾಲ ಫಿಫಾ ಫುಟ್ಬಾಲ್ ಸಮಿ ಫೈನಲ್ ನಡೆಯಲಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ ತಿನಿಸುಗಳನ್ನು ಒದಗಿಸುವ ಅಂಗಡಿಗಳ ಸಮಯ ರಾತ್ರಿ 1 ಗಂಟೆಯಿಂದ 3:30ರವರೆಗೂ ವಿಸ್ತರಣೆ ಮಾಡಲಾಗಿದೆ.
ಒಂದು ವೇಳೆ ಈ ಅವಧಿ ಮೀರಿ ಅಂಗಡಿಗಳನ್ನು ತೆರೆದಿದ್ದರೆ, ಕಾನೂನು ಕ್ರಮ ಜರುಗಿಸಲಾಗುವುದು.ಅದೇ ರೀತಿ, ಅಬಕಾರಿ, ಹೋಟೆಲ್ ನಿಯಮ ಒಳಗೊಂಡಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ(ಆಡಳಿತ) ಡಾ.ಎ.ಸುಬ್ರಣ್ಯೇಶ್ವರರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.