×
Ad

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಹೊಟೇಲ್ ಸಿಬ್ಬಂದಿ ವಾಸವಿದ್ದ ಕೊಠಡಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು

Update: 2022-12-13 23:49 IST

ಬೆಂಗಳೂರು, ಡಿ.13: ಕ್ಷುಲ್ಲಕ ಕಾರಣಕ್ಕೆ ಹೊಟೇಲ್ ಸಿಬ್ಬಂದಿ ತಂಗುವ ಕೊಠಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಹನುಮಂತನಗರದಲ್ಲಿ ನಡೆದಿದೆ.

ಹನುಮಂತನಗರದ ಕುಮಾರ್ ಹೊಟೇಲ್ ಗೆ ಮೂವರು ಯುವಕರು ಬಂದಿದ್ದು, ಊಟ ಕೇಳಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಇಲ್ಲ ಎಂದಿದ್ದಕ್ಕೆ ಯುವಕರ ನಡುವೆ ಮಾತಿನ ಚಕಮಕಿ ಆಗಿ ಗಲಾಟೆಗೆ ನಡೆದಿದೆ.

ಗಲಾಟೆಯಲ್ಲಿ ಹೊಟೇಲ್ ಸಿಬ್ಬಂದಿ ಯುವಕರ ಮೇಲೆ ಹಲ್ಲೆ ಮಾಡಿ ಕಳಿಸಿದ್ದಾರೆ. ಆನಂತರ, ಗ್ರಾಹಕ ದೇವರಾಜ್, ಗಣೇಶ್ ಹಾಗೂ ದೇವೇಗೌಡ ನೇರ ಪೆಟ್ರೋಲ್‍ಬಂಕ್‍ಗೆ ತೆರಳಿ 8 ಲೀಟರ್ ಪೆಟ್ರೋಲ್ ಖರೀದಿಸಿದ್ದಾರೆ. ಅಲ್ಲಿಂದ ಕುಮಾರ್ ಹೋಟೆಲ್ ಪಕ್ಕದಲ್ಲೇ ಇರುವ ಹೋಟೆಲ್ ಸಿಬ್ಬಂದಿಯ ಕೊಠಡಿಯ ಕಡೆ ಹೋಗಿ ಮನೆಯ ಬಾಗಿಲು, ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಅದೃಷ್ಟವಶಾತ್ ರೂಮ್‍ನಲ್ಲಿ ವಾಸವಿದ್ದ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Similar News