ಅಸೈಗೋಳಿ: ಯುವಕ ನೇಣುಬಿಗಿದು ಆತ್ಮಹತ್ಯೆ
Update: 2022-12-14 15:54 IST
ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಸೈಟ್ ಬಳಿ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಅಸೈಗೋಳಿ ಸೈಟ್ ನಿವಾಸಿ ಅಭಿಲಾಷ್ ( 36) ಎಂಬಾತನೇ ಮೃತಪಟ್ಟ ಯುವಕನಾಗಿದ್ದಾನೆ. ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ಈತ ಇತ್ತೀಚಿನ ಕೆಲ ಸಮಯದಿಂದ ಉದ್ಯೋಗಕ್ಕೂ ತೆರಳದೆ ಮನೆಯಲ್ಲೇ ಉಳಿದುಕೊಂಡಿದ್ದ ಎನ್ನಲಾಗಿದೆ.
ಎಂದಿನಂತೆ ಬೆಳಿಗ್ಗೆ ಜಾಗಿಂಗ್ ಗೆ ತೆರಳಿದ್ದ ಈತ ಮನೆಗೆ ಮರಳಿದ್ದ, ಮನೆ ಮಂದಿ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಮನೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.