274 ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್ ಹುದ್ದೆಗೆ ಬಡ್ತಿ: ಸಚಿವ ಅಶ್ವತ್ಥನಾರಾಯಣ

Update: 2022-12-15 16:09 GMT

ಬೆಂಗಳೂರು: ಇದೇ ಮೊದಲ ಬಾರಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ 274 ಸಹ ಪ್ರಾಧ್ಯಾಪಕರುಗಳಿಗೆ (ಅಸೋಸಿಯೇಟ್‌ ಪ್ರೊಫೆಸರ್‍ಸ್) ಪ್ರಾಧ್ಯಾಪಕರಾಗಿ ಬಡ್ತಿ ನೀಡಲು ರಾಜ್ಯ ಸರಕಾರವು ನಿರ್ಧರಿಸಿದೆ. ಈ ಸಂಬಂಧವಾಗಿ ಬುಧವಾರ (ಡಿ.14) ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಗುರುವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಸರಕಾರದ ಈ ನಿರ್ಧಾರದಿಂದ 274 ಸಹ ಪ್ರಾಧ್ಯಾಪಕರಿಗೆ ಮುಂಬಡ್ತಿ ಸಿಗಲಿದೆ. ಉನ್ನತ ಶಿಕ್ಷಣ ಇಲಾಖೆಯ ಭಾಗವಾಗಿರುವ ವೃತ್ತಿ ಸುಧಾರಣೆ ಆಯ್ಕೆ ಸಮಿತಿಯ ತೀರ್ಮಾನದ ಮೇಲೆ ಈ ಹೆಜ್ಜೆ ಇಡಲಾಗುತ್ತಿದೆ ಎಂದಿದ್ದಾರೆ.

ಯುಜಿಸಿ ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್ ಗಳಾಗಿ ಬಡ್ತಿ ನೀಡಬಹುದೆಂದು 2010ರಲ್ಲೇ ಹೇಳಿದೆ. ಆದರೆ ಕಳೆದ 12 ವರ್ಷಗಳಿಂದ ಈ ವಿಚಾರದಲ್ಲಿ ಯಾವ ಪ್ರಗತಿಯೂ ಆಗಿರಲಿಲ್ಲ. ಈಗ ಸರಕಾರವು 274 ಅಸೋಸಿಯೇಟ್‌ ಪ್ರೊಫೆಸರುಗಳಿಗೆ ಬಡ್ತಿ ನೀಡಲು ಅಧಿಸೂಚನೆ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ.

Similar News