ಡಿ.18ಕ್ಕೆ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮ, 25 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರು, ಡಿ.15: ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ‘ಬೆಳ್ಳಿ ಸಂಭ್ರಮ’ವನ್ನು ಡಿ.18ರಂದು ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ 25ಮಂದಿ ಸಾಹಿತಿ, ಪತ್ರಕರ್ತರು ಮತ್ತು ಸಮಾಜ ಸೇವಕರಿಗೆ ಪ್ರಶಸ್ತಿ ‘ಬೆಳ್ಳಿ ಸಂಭ್ರಮ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಅರ್ಜುನ್ ಗೊಳಸಂಗಿ ತಿಳಿಸಿದ್ದಾರೆ.
ಹಿರಿಯ ಮುಖಂಡ ಮಾವಳ್ಳಿ ಶಂಕರ್, ಪತ್ರಕರ್ತೆ ಮಂಜುಶ್ರೀ ಕಡಕೋಳ, ಲೇಖಕ ಪ್ರೊ.ಎಂ. ನಾರಾಯಣ ಸ್ವಾಮಿ, ಡಾ.ಸತ್ಯಮಂಗಲ ಮಹದೇವ, ಡಾ.ಟಿ.ಯಲ್ಲಪ್ಪ, ಡಾ.ಸಿ.ಚಂದ್ರಪ್ಪ, ಡಾ.ಹುಲಿಕುಂಟೆ ಮೂರ್ತಿ, ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ, ನ.ಗುರುಮೂರ್ತಿ, ವಿ.ಎಂ.ಮಂಜುನಾಥ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಮಾಯಣ್ಣಸ್ವಾಮಿ ಕಿರಂಗೂರು, ನಾಗರಾಜ ತಳವಾರ, ರಾಜು ಎಸ್.ಸೂಲೇನಹಳ್ಳಿ, ಎನ್.ಆರ್. ಪ್ರಭು, ಡಾ.ಆನಂದ್ ಮಾಲೂರು, ಮೈಕೋ ಶಿವಶಂಕರ್, ಎನ್. ನರಸಿಂಹಮೂರ್ತಿ, ಡಾ. ಆರ್. ಗುರುಸ್ವಾಮಿ, ಬಿ.ಚಾಮರಾಜ್, ಎನ್.ರಾಜಣ್ಣ, ಸಂಪತ್ ಕುಮಾರ್, ಬಿ.ವಿ.ಮಂಜುಳಾ, ವಿಮಲಾದೇವಿ, ಟಿ.ಶ್ರೀನಿವಾಸ ಕುಂಬಾರ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.