ಯಾವ ಪಕ್ಷ ಅಧಿಕಾರಕ್ಕೆ ಬಂದರೂ, ಸಂವಿಧಾನದಂತೆ ಆಳ್ವಿಕೆ ಮಾಡಲಿ: ನ್ಯಾ.ನಾಗಮೋಹನ್ ದಾಸ್

Update: 2022-12-15 17:04 GMT

ಬೆಂಗಳೂರು, ಡಿ.15: ದೇಶವನ್ನು ಯಾವುದೇ ಪಕ್ಷಗಳು ಆಳ್ವಿಕೆ ಮಾಡಲಿ ಆದರೆ, ಸಂವಿಧಾನದ ಪ್ರಕಾರ ಆಳ್ವಿಕೆ ಮಾಡಿದರೆ, ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯುತ್ತದೆ ಎಂದು ನಿವೃತ್ತ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ತಿಳಿಸಿದ್ದಾರೆ.

ಗುರುವಾರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ‘ಕನ್ನಡ ಸಂಶೋಧನಾ ವಿದ್ಯಾರ್ಥಿಗಳ ವಿಚಾರ ವೇದಿಕೆ’ ವತಿಯಿಂದ ಆಯೋಜಿಸಿದ್ದ ‘ಸಂವಿಧಾನ ಓದು’ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಭಾರತ ದೇಶದ ಆತ್ಮಸಾಕ್ಷಿಯಾಗಿರುವ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಭಾರತ ದೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇಂದಿನ ತುರ್ತು ಸನ್ನಿವೇಶದಲ್ಲಿ ವಿದ್ಯಾವಂತರು ಸಂವಿಧಾನವನ್ನು ಸರಿಯಾಗಿ ಓದಿ ಎಲ್ಲರಿಗೂ ತಿಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇದು ವಿದ್ಯಾವಂತರ ಜವಾಬ್ದಾರಿಯೂ ಆಗಬೇಕು ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಜಯಕರ್ ಎಸ್.ಎಂ., ಭಾರತದ ಸಂವಿಧಾನ ದೇಶದ ಅತ್ಯುನ್ನತ ಗ್ರಂಥವಾಗಿದೆ. ಅದಕ್ಕಿಂತ ಮಿಗಿಲಾಗಿದ ಯಾವುದೇ ಗ್ರಂಥವಿಲ್ಲ ಎಂದು ಅಭಿಪ್ರಾಯ ಪಟ್ಟರು. 

ಕಾರ್ಯಕ್ರಮದಲ್ಲಿ ‘ಕನ್ನಡ ಸಂಶೋಧನಾ ವಿದ್ಯಾರ್ಥಿಗಳ ವಿಚಾರ ವೇದಿಕೆ’ ವತಿಯಿಂದ ಕನ್ನಡ ಅಧ್ಯಯನ ಕೇಂದ್ರ ವಿಭಾಗದ ಗ್ರಂಥಾಲಯಕ್ಕೆ ಅಂಬೇಡ್ಕರ್ ಸಮಗ್ರ ಬರಹ ಮತ್ತು ಭಾಷಣಗಳ ಸಂಪುಟಗಳನ್ನು ನೀಡಿ, ಅರ್ಥಪೂರ್ಣವಾಗಿ ಸಂವಿಧಾನ ದಿನವನ್ನು ಆಚರಿಸಿದರು. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಮುನಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Similar News