ಬೆಂಗಳೂರು: ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ವಸ್ತು ಸರಬರಾಜು; ಆರೋಪಿ ಬಂಧನ

Update: 2022-12-17 12:31 GMT

ಬೆಂಗಳೂರು, ಡಿ.17: ಮಾದಕ ವಸ್ತುಗಳನ್ನು ಸಾಗಿಸಲು ಸ್ವಿಗ್ಗಿ ಹಾಗೂ ಝೊಮ್ಯಾಟೊ ಸೇವೆ ಸಿಬ್ಬಂದಿ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 4 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. 

ಬಂಧಿತನಿಂದ 4 ಲಕ್ಷ ಮೌಲ್ಯದ 3 ಕೆ.ಜಿ ಗಾಂಜಾ ಹಾಗೂ14 ಗ್ರಾಂ ತೂಕದ 12 ಎಲ್‍ಎಸ್‍ಡಿ ಸ್ಟ್ರಿಪ್ ಮೊಬೈಲ್, ದ್ವಿಚಕ್ರ ವಾಹನ ಇತರೇ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಝೊಮ್ಯಾಟೊ ಹಾಗೂ ಸ್ವಿಗ್ಗಿ ಕಂಪೆನಿಯ ಟೀ ಶರ್ಟ್‍ಗಳನ್ನು ಧರಿಸಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ. ಆರೋಪಿ ಬಿಹಾರದಿಂದ ಗಾಂಜಾ ಮತ್ತು ಇತರೆ ಡ್ರಗ್ಸ್ ಅನ್ನು ಆಮುದು ಮಾಡಿಕೊಳ್ಳುತ್ತಿದ್ದ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಇನ್ನೂ, ಆಹಾರ ವಿತರಣಾ ಕಂಪೆನಿಯಲ್ಲಿ ಮಾಜಿ ಡೆಲವರಿ ಬಾಯ್ ಆಗಿದ್ದು, ಕೆಲಸ ಬಿಟ್ಟ ನಂತರ ಕಂಪೆನಿಗೆ ತನ್ನ ಸಮವಸ್ತ್ರ ಮತ್ತು ಚೀಲವನ್ನು ಹಿಂತಿರುಗಸದೇ ಅದನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಈ ಸಂಬಂಧ ವೈಟ್‍ಫೀಲ್ಡ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Similar News