×
Ad

ಬಾವಿಗೆ ಬಿದ್ದು ಯುವಕ ಮೃತ್ಯು

Update: 2022-12-17 19:46 IST

ಬೆಂಗಳೂರು, ಡಿ.17: ಬಾವಿಗೆ ಗ್ರಿಲ್ ಅಳವಡಿಸುವ ವೇಳೆ ಜಾರಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಇಲ್ಲಿನ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವು ಯಾನೆ ಶಿವಕುಮಾರ್ (26) ಮೃತ ಯುವಕ ಎಂದು ತಿಳಿದುಬಂದಿದೆ.

ಹಳೆಯ ಕಬ್ಬಿಣದ ಗ್ರಿಲ್ ತೀವ್ರವಾಗಿ ಹಾಳಾಗಿದ್ದ ಹಿನ್ನೆಲೆಯಲ್ಲಿ ಅದರ ಮೇಲೆಯೇ ಕುಳಿತು ವೆಲ್ಡಿಂಗ್ ಮಾಡುತ್ತಿದ್ದು, ಈ ವೇಳೆ ಬಾವಿಯೊಳಗೆ ಬಿದ್ದಿದ್ದಾನೆನ್ನಲಾಗಿದೆ.

ರಕ್ಷಣೆ ಮಾಡಲು ತುರ್ತಾಗಿ ಯಾವುದೇ ಸಾಮಗ್ರಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇನ್ನೂ ಯಾಕೆ ಬಿಜೆಪಿಯಲ್ಲಿದ್ದೀರಿ?: ಎಚ್.ವಿಶ್ವನಾಥ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

Similar News