×
Ad

ಬೆಂಗಳೂರು | ವೇಶ್ಯಾವಾಟಿಕೆ ಚಟುವಟಿಕೆ ಆರೋಪ: ಇಬ್ಬರು ಮಹಿಳೆಯರು ಸೇರಿ 8 ಮಂದಿ ವಿದೇಶಿಗರು ಸೆರೆ

Update: 2022-12-17 22:14 IST

ಬೆಂಗಳೂರು, ಡಿ.17: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಎಂಟು ಮಂದಿ ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ಹಾಗೂ ಸೋಲದೇವನಹಳ್ಳಿಯ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ್ದು, ಇಬ್ಬರು ಮಹಿಳೆಯರು ಹಾಗೂ ಆರು ಮಂದಿ ಪುರುಷರನ್ನು ವಶಕ್ಕೆ ಪಡೆಯಲಾಗಿದೆ. 

ಆರೋಪಿಗಳು ಪ್ರಾಥಮಿಕವಾಗಿ ವಿಚಾರಣೆ ವೇಳೆ ತಾವು ಭಾರತ ನಿವಾಸಿಗಳು ಎಂದಿದ್ದಾರೆ . ಆದರೆ, ಪಶ್ಚಿಮ ಬಂಗಾಳ ಮತ್ತು ತ್ರಿಪುರದ ಆಧಾರ್ ಕಾರ್ಡ್ ಸೇರಿ ಕೆಲ ದಾಖಲೆಗಳು ದೊರೆತಿವೆ. 

ಆರೋಪಿಗಳು ಅಕ್ರಮ ವಲಸೆ ಬಂದವರು ಎಂಬ ಅನುಮಾನವಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

Similar News