'ಕೆರಳಿದ' ಲಿಯೊನೆಲ್ ಮೆಸ್ಸಿಯನ್ನು ರಸ್ತೆ ಜಾಗೃತಿಗೆ ಬಳಸಿದ ಬೆಂಗಳೂರು ಸಿಟಿ ಪೊಲೀಸ್!

ನೆಟ್ಟಿಗರ ಮೆಚ್ಚುಗೆ

Update: 2022-12-19 18:10 GMT

ಬೆಂಗಳೂರು: ಫಿಫಾ ವಿಶ್ವಕಪ್‌ ಅರ್ಜೇಂಟಿನಾ ಪಾಲಾದ ಬಳಿಕ ಎಲ್ಲೆಡೆಯೂ ಅದರ ಕ್ಯಾಪ್ಟನ್‌ ಲಿಯೊನೆಲ್‌ ಮೆಸ್ಸಿ (Lionel Messi) ರಾರಾಜಿಸುತ್ತಿದ್ದಾರೆ. ಈ ನಡುವೆ, ಬೆಂಗಳೂರು ಸಿಟಿ ಪೊಲೀಸರು (BengaluruCityPolice)  ಮೆಸ್ಸಿಯ ವಿಡಿಯೋ ತುಣುಕೊಂದು ಬಳಸಿ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.

ರಸ್ತೆಗಳಲ್ಲಿ ವಾಹನ ಸವಾರರು ಪರಸ್ಪರ ಜಗಳವಾಡದಂತೆ ಜಾಗೃತಿ ನಡೆಸಲು ಬೆಂಗಳೂರು ಪೊಲೀಸರು ಮೆಸ್ಸಿಯ ವಿಡಿಯೋ ತುಣುಕನ್ನು ಬಳಸಿದ್ದಾರೆ. 

ಮೆಸ್ಸಿ ಕೋಪಗೊಂಡಿರುವ ವಿಡಿಯೋ ತುಣುಕು ಬಳಸಿಕೊಂಡ ಬೆಂಗಳೂರು ಪೊಲೀಸರು, "ನಿನ್ನನ್ನು ಯಾರು ನೋಯಿಸಿದರು ಬ್ರೋ (ಸಹೋದರ). ಬೆಂಗಳೂರು ಸಿಟಿ ಪೊಲೀಸರ ಪ್ರೀತಿಯ ಅಪ್ಪುಗೆ ಇಲ್ಲಿದೆ." ಎಂದು ಮೆಸ್ಸಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದಾರೆ. ಅದರೊಂದಿಗೆ, ವಾಹನ ಸಂಚಾರರಿಗೆ ʼದಯವಿಟ್ಟು ಬೀದಿಗಳಲ್ಲಿ ಶಾಂತವಾಗಿರಿ ಮತ್ತು ನಾಗರಿಕರಾಗಿ ವರ್ತಿಸಿʼ ಎಂದು ಸಲಹೆಯನ್ನೂ ನೀಡಿದ್ದಾರೆ. 

ಬೆಂಗಳೂರು ಪೊಲೀಸರ ಈ ಮಾರ್ಮಿಕ ಜಾಗೃತಿಯನ್ನು ಹಲವು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Similar News