×
Ad

ಮಂಗಳೂರು: ವಿದ್ಯಾರ್ಥಿವೇತನ ರದ್ದತಿ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ

Update: 2022-12-19 23:40 IST

ಮಂಗಳೂರು: ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ ಮೂಲಕ 1ರಿಂದ 8ನೇ ತರಗತಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ದ.ಕ.ಜಿಲ್ಲಾ ಎಸ್‌ಎಫ್‌ಐ ವತಿಯಿಂದ ನಗರದ ಕ್ಲಾಕ್‌ಟವರ್ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.

ಸರಕಾರಿ ಕಾಲೇಜುಗಳ  ಶುಲ್ಕವನ್ನು  ಹೆಚ್ಚಳ ಮಾಡಿರುವುದನ್ನು ಮತ್ತು ಪರೀಕ್ಷೆ ಫಲಿತಾಂಶ ವಿಳಂಬದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸದೆ ಆಡಳಿತ ವರ್ಗ ತೋರುವ ನಿರ್ಲಕ್ಷ್ಯವನ್ನು ಖಂಡಿಸಲಾಯಿತು.

ಪ್ರತಿಭಟನೆಯಲ್ಲಿ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್, ಎಸ್‌ಎಫ್‌ಐ ದ.ಕ.ಜಿಲ್ಲಾಧ್ಯಕ್ಷ ವಿನಿತ್ ದೇವಾಡಿಗ , ಮಾಜಿ ವಿದ್ಯಾರ್ಥಿ ಮುಖಂಡ ಮನೋಜ್ ವಾಮಂಜೂರು ಮಾತನಾಡಿದರು.

ಎಸ್‌ಎಫ್‌ಐ ಕಾರ್ಯದರ್ಶಿ ರೇವಂತ್ ಕದ್ರಿ, ಮುಖಂಡರಾದ ಪ್ರಥಮ್ ಬಜಾಲ್, ಶಿವಾನಿ, ತಾನುಶ್ರೀ, ಸುಪ್ರಿಯಾ, ಫಾತಿಮತ್ ಅಖಿಲಾ, ಶಾಹಿದ್ ಅಫ್ರಿದ್, ವಿನುಷಾ ರಮಣ, ಶಮಾಝ್ ಕೆ.ಸಿ. ರೋಡ್, ತಿಲಕ್‌ರಾಜ್ ಕುತ್ತಾರ್, ಪೂಜಿತ್ ಕೃಷ್ಣ, ಪ್ರಜ್ವಲ್ ಉಪಸ್ಥಿತರಿದ್ದರು.

Similar News