×
Ad

ರಮೇಶ್ ಜಾರಕಿಹೊಳಿ, ಈಶ್ವರಪ್ಪಗೆ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ ಹೇಳಿದ್ದೇನು?

Update: 2022-12-20 12:03 IST

ಬೆಳಗಾವಿ, ಡಿ.20: ರಮೇಶ್ ಜಾರಕಿಹೊಳಿ ಹಾಗೂ ಕೆ.ಎಸ್ ಈಶ್ವರಪ್ಪ‌ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ದೆಹಲಿ ಭೇಟಿ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. 

ಸುವರ್ಣಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸದನಕ್ಕೆ ಗೈರು ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಹಜವಾಗಿ ತಮ್ಮ ಕೇಸ್ ಗಳ ಮುಕ್ತವಾದ ಮೇಲೆ, ಮತ್ತೊಮ್ಮೆ ಸಚಿವ ಸಂಪುಟ ಸೇರಬೇಕು. ಅವರ ವಿಚಾರವನ್ನು ಮೊನ್ನೆ ದೆಹಲಿಗೆ ಪ್ರಸ್ತಾವನೆ ಮಾಡಿದ್ದೇನೆ.‌ ಈಶ್ವರಪ್ಪ‌ ಹಾಗೂ ರಮೇಶ್ ಜಾರಕಿಹೊಳಿ ಅವರ ಸಂಪರ್ಕದಲ್ಲಿ ಇದ್ದೇನೆ ಎಂದರು.

ಡಿಕೆಶಿ ಮೇಲೆ  ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಬಿಐ‌ ಒಂದು ಸಂವಿಧಾನಿಕ ಸಂಸ್ಥೆ.‌ ಸಿಬಿಐ ಮುಂದೆ ಯಾವ ಕೇಸ್ ಇದೆ ಎಂದು ಶಿವಕುಮಾರ್ ಅವರಿಗೆ ಗೊತ್ತಿದ್ದ ವಿಚಾರ ಎಂದರು. 

ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿ, ‌'ಸರ್ಕಾರ ಹಿಂದುಳಿದ ಆಯೋಗಕ್ಕೆ ಸೂಕ್ತವಾಗಿ ವರದಿ ಮಂಡಿಸುವಂತೆ ಸೂಚನೆ ಕೊಟ್ಟಿದೆ. ಆ ವರದಿ ಬಂದ ಬಳಿಕ  ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ' ಎಂದರು.

ಇದನ್ನೂ ಓದಿ... ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಕೆ. ಎಸ್.‌ ಈಶ್ವರಪ್ಪ - ರಮೇಶ್ ಜಾರಕಿಹೊಳಿ ಭೇಟಿ

Similar News