×
Ad

ಪುರುಷೋತ್ತಮ ಪೂಜಾರಿಯ ಚಿಕಿತ್ಸಾ ‌ವೆಚ್ಚ ಭರಿಸುವುದಾಗಿ‌ ದ.ಕ.ಜಿಲ್ಲಾಡಳಿತದಿಂದ ಆಸ್ಪತ್ರೆಯ ‌ಮುಖ್ಯಸ್ಥರಿಗೆ ಪತ್ರ

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ

Update: 2022-12-21 13:30 IST

ಮಂಗಳೂರು: ಕುಕ್ಕರ್ ಸ್ಫೋಟದ ಗಾಯಾಳು, ಸಂತ್ರಸ್ತ ಪುರುಷೋತ್ತಮ ಪೂಜಾರಿಯ ಚಿಕಿತ್ಸಾ ‌ವೆಚ್ಚ ಭರಿಸುವುದಾಗಿ‌ ಕಂಕನಾಡಿ ಫಾದರ್ ಮುಲ್ಲರ್ ವೈದ್ಯಕೀಯ ಆಸ್ಪತ್ರೆಯ ‌ಮುಖ್ಯಸ್ಥರಿಗೆ ದ.ಕ.ಜಿಲ್ಲಾಡಳಿತ ಪತ್ರಬರೆದಿದೆ.

ಕುಟುಂಬದಿಂದ ಯಾವುದೇ ವೆಚ್ಚವನ್ನು ಭರಿಸಲು ಒತ್ತಡ ಹಾಕದೇ ಅವರಿಗೆ ಸೂಕ್ತವಾದ ಚಿಕಿತ್ಸೆಯನ್ನು ಮುಂದುವರಿಸುವಂತೆ ಮುಲ್ಲರ್ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಜಿಲ್ಲಾಡಳಿತ ಪತ್ರದ ಮೂಲಕ ತಿಳಿಸಿದೆ.

Similar News