ಪಣಂಬೂರು: ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಯೂನಿಯನ್ ಚುನಾವಣೆ
Update: 2022-12-22 16:49 IST
ಪಣಂಬೂರು: ಇಲ್ಲಿನ ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಚೆಕ್ ಆಫ್ ಪದ್ಧತಿ ಮೂಲಕ ನೌಕರರು ತಮ್ಮ ಯೂನಿಯನುಗಳ ಆಯ್ಕೆ ಬಗ್ಗೆ ಚುನಾವಣಾ ಪ್ರಕ್ರಿಯೆಗಳು ಬುಧವಾರ ಮತ್ತು ಗುರುವಾರ ಜರಗಿತು.
ಎಚ್.ಎಂ.ಎಸ್., ಇಂಟಕ್, ಬಿ.ಎಂ.ಎಸ್. ಮತ್ತು ಎ.ಐ. ಟಿ.ಯು. ಸಿ. ಯೂನಿಯನುಗಳು ಚುನಾವಣಾ ಕಣದಲ್ಲಿದ್ದು, ಶುಕ್ರವಾರ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ತಿಳಿದು ಬಂದಿದೆ.