ಡಿ.31ರವರೆಗೆ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಪ್ಯಾಕೇಜ್ ಪ್ರವಾಸ

Update: 2022-12-23 18:20 GMT

ಮಂಗಳೂರು: ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಕೇರಳ ಪ್ಯಾಕೇಜ್ (ವಿವಿಧ ದೇವಸ್ಥಾನ, ಪ್ರೇಕ್ಷಣೀಯ ಸ್ಥಳಗಳಿಗೆ)  ಹಾಗೂ ಮಡಿಕೇರಿ ಪ್ಯಾಕೇಜ್ ಪ್ರವಾಸವನ್ನು ಡಿ.31ರವರೆಗೆ ಕರ್ನಾಟಕ ಸಾರಿಗೆ ವಾಹನದೊಂದಿಗೆ ನಡೆಯಲಿದೆ.

ಮಾರ್ಗ ಮತ್ತು ವೇಳಾ ವಿವರ:
ಕೇರಳ ಪ್ಯಾಕೇಜ್ ವಿವರ: ಮಂಗಳೂರು ಬಸ್ ನಿಲ್ದಾಣ-ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬೆಳಗ್ಗೆ 8 ರಿಂದ 10ರವರೆಗೆ, ಕುಂಬ್ಳೆ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಬೆಳಗ್ಗೆ 10:15 ರಿಂದ 11ರವರೆಗೆ, ಮಧೂರು ಶ್ರೀ ಮದನಂತೇಶ್ವರ, ಗಣಪತಿ ದೇವಸ್ಥಾನ 11:15ರಿಂದ 12ರವರೆಗೆೆ, ಮಲ್ಲಾ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ 12:30ರಿಂದ 1:30ರವರೆಗೆ (ಊಟದ ಸಮಯ) ನಂತರ ಕಾಂಞಂಗಾಡ್ ನಿತ್ಯಾನಂದ ಆಶ್ರಮ  ಅಪರಾಹ್ನ 3ರಿಂದ 4ರವರೆಗೆ, ಬೇಕಲ್ ಫೋರ್ಟ್, ಬೀಚ್ 4:15ರಿಂದ ಸಂಜೆ 6ರವರೆಗೆ ರಾತ್ರಿ 8ಕ್ಕೆ ಮಂಗಳೂರು ಬಸ್ ನಿಲ್ದಾಣ ತಲುಪಲಿದೆ.

ಪ್ರತಿ ಪ್ರಯಾಣಿಕರಿಗೆ ಪ್ರಯಾಣ ದರ (ಊಟ ಉಪಹಾರ ಹೊರತುಪಡಿಸಿ) ವಯಸ್ಕರಿಗೆ 750 ರೂ. (ಕೇರಳ ರಾಜ್ಯದ ಎಂಟ್ರಿ ಟ್ಟಾಕ್ಸ್ 310 ರೂ. ಹಾಗೂ ಟೋಲ್ ದರ 10 ರೂ.ಒಳಗೊಂಡಂತೆ), ಮಕ್ಕಳಿಗೆ 700 ರೂ. (6 ವರ್ಷದಿಂದ 12 ವರ್ಷದವರಿಗೆ) ನಿಗದಿಪಡಿಸಲಾಗಿದೆ.

ಮಂಗಳೂರಿನಿಂದ ಬೆಳಗ್ಗೆ 7ಕ್ಕೆ ಹೊರಟು ಪುತ್ತೂರು, ಸುಳ್ಯ (ಉಪಹಾರದ ಸಮಯ) ಮಾರ್ಗವಾಗಿ ಪೂ.11ಕ್ಕೆ ಮಡಿಕೇರಿ ರಾಜಸೀಟ್ ನಂತರ 11:30ರಿಂದ 11:45ರವರೆಗೆ ರಾಜಸೀಟ್, ಅಬ್ಬಿಫಾಲ್ಸ್ ಮಧ್ಯಾಹ್ನ 2:30ರಿಂದ 3:15ರವರೆಗೆ ಅಬ್ಬಿಫಾಲ್ಸ್, ನಿಸರ್ಗಧಾಮ (ಊಟದ ಸಮಯ) ಸಂಜೆ 4:30ರಿಂದ 4:45ರವರೆಗೆ ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಸಂಜೆ 5:15ರಿಂದ 5:30ರವರೆಗೆ ಗೋಲ್ಡನ್ ಟೆಂಪಲ್, ಹಾರಂಗಿಡ್ಯಾಮ್, ಸಂಜೆ 6:15ಕ್ಕೆ ಹಾರಂಗಿಡ್ಯಾಮ್‌ನಿಂದ ಹೊರಟು ರಾತ್ರಿ 10:30ಕ್ಕೆ ಮಂಗಳೂರು ತಲುಪಲಿದೆ.

ಪ್ರತಿ ಪ್ರಯಾಣಿಕರಿಗೆ ಪ್ರಯಾಣದರ (ಊಟ ಉಪಹಾರ ಹೊರತು ಪಡಿಸಿ) ವಯಸ್ಕರಿಗೆ 500 ರೂ. ಹಾಗೂ ಮಕ್ಕಳಿಗೆ 450 ರೂ. (6 ವರ್ಷದಿಂದ 12ವರ್ಷದವರಿಗೆ) ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ದೂ.ಸಂ: 7760990702, 7760990711, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ ಸಂ: 9663211553   ಮಂಗಳೂರು ಬಸ್ ನಿಲ್ದಾಣ ಸಂ: 7760990720ನ್ನು ಸಂಪರ್ಕಿಸಬಹುದು. ಪ್ಯಾಕೇಜ್ ಪ್ರವಾಸಕ್ಕೆ ತಿತಿತಿ.ಞsಡಿಣಛಿ.iಟಿ ನಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Similar News