×
Ad

ಮಡಂತ್ಯಾರಿನಲ್ಲಿ ನಿರ್ಮಾಣಗೊಂಡಿದ ಸೌಹಾರ್ದತೆಯ ಗೋದಲಿ

Update: 2022-12-24 23:36 IST

ಬೆಳ್ತಂಗಡಿ: ಕ್ರೈಸ್ತರು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಚರ್ಚ ಗಳಲ್ಲಿ ಹಾಗೂ ಮನೆಗಳಲ್ಲಿ ಗೋದಲಿಗಳನ್ನು ನಿರ್ಮಿಸುವುದ ಸಾಮಾನ್ಯ. ಇದೀಗ ಮಡಂತ್ಯಾರಿನಲ್ಲಿ ಹಿಂದೂ, ಮುಸ್ಲಿಮರು ಮತ್ತು ಕ್ರೈಸ್ತರು ಎಲ್ಲರೂ ಸೇರಿ ಸೌಹಾರ್ದತೆಯ ಗೋದಲಿಯನ್ನು ನಿರ್ಮಿಸಿದ್ದಾರೆ.

ಸ್ಥಳೀಯ ಯುವಕರಾದ ಪ್ರವೀಣ್ ಪೂಜಾರಿ, ಸಂತೋಷ್ ಹೆಗ್ಡೆ, ಪ್ರವೀಣ್, ಸೋಮಯ್ಯ, ಸಾಗರ್, ಆಸಿಫ್, ಸುರೇಶ, ಶಿವರಾಜ ಆಚಾರ್ಯ, ಅರುಣ್, ಗುರು ಹಾಗೂ ಸುಜಿತ್ ಸೇರಿ ಸುಂದರವಾದ ಗೋದಲಿಯೊಂದನ್ನು ನಿರ್ಮಿಸಿದ್ದಾರೆ.

ಇದೀಗ ಇವರು ನಿರ್ಮಿಸಿರುವ ಗೋದಲಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಜೀವಂತ ದನಗಳು,ಕುರಿಗಳು, ಮೊಲಗಳು, ಪಾರಿವಾಳಗಳು ಎಲ್ಲವೂ ಈ ಗೋದಲಿಯಲ್ಲಿದೆ. 

ನಾವು ಬಾಲ್ಯದಿಂದಲೂ ಸೌಹಾರ್ದತೆಯ ವಾತಾವರಣದಲ್ಲಿ ಬೆಳೆದವರು. ಚಿಕ್ಕದಿನಿಂದಲೂ ಗೋದಲಿಯನ್ನು ಮಾಡುವುದರಲ್ಲಿ ಭಾಗವಹಿಸುತ್ತಿದ್ದೆವು. ಒಂದು ಸೌಹಾರ್ದತೆಯ ಗೋದಲಿಯನ್ನು ನಿರ್ಮಿಸಬೇಕು ಎಂಬುದು ಕಳೆದ ಕೆಲವು ವರ್ಷಗಳಿಂದ ಆಲೋಚಿಸಿದ್ದೆವು ಆದರೆ ಅದು ಸಾಧ್ಯವಾಗಿರಲಿಲ್ಲ ಈ ವರ್ಷ ಮಡಂತ್ಯಾರಿನಲ್ಲಿ ಇದಕ್ಕೆ ಅವಕಾಶ ಸಿಕ್ಕಿದೆ. ಇನ್ನು ಪ್ರತಿವರ್ಷ ಅದನ್ನು ಮಾಡಬೇಕು ಎಂಬ ಆಸೆಯಿದೆ.
-ಪ್ರವೀಣ್ ಪೂಜಾರಿ

Similar News