×
Ad

ಸುರತ್ಕಲ್ ಪೇಟೆಯಲ್ಲಿ ಪೊಲೀಸರಿಂದ ವಾಹನ ತಪಾಸಣೆ

Update: 2022-12-26 20:32 IST

ಸುರತ್ಕಲ್: ಕೃಷ್ಣಾಪುರ ನೈತಂಗಡಿ ಜಲೀಲ್ ಕೊಲೆ ಹಿನ್ನೆಲೆಯಲ್ಲಿ ಸುರತ್ಕಲ್ ಪೇಟೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ.

ಜಲೀಲ್ ಕೊಲೆಯ ಬಳಿಕ ಸುರತ್ಕಲ್, ಪಣಂಬೂರು, ಬಜ್ಪೆ, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ 6ರಿಂದ ಸೆಕ್ಷನ್ 114ರಡಿ ನಿಷೇಧಾಜ್ಞೆ ಹೊರಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ 6ಗಂಟೆಗೂ ಮುನ್ನ ಸುರತ್ಕಲ್‌ ನಗರ, ಕಾಟಿಪಳ್ಳ, ಕೃಷ್ಣಾಪುರ ಸೇರಿದಂತೆ ಸೆಕ್ಷನ್ ಪ್ರದೆಶಗಳಲ್ಲಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದರು.

ಸುಮಾರು 100ಕ್ಕೂ ದ್ವಿಚಕ್ರ ವಾಹನಗಳು ಮತ್ತು 20ಕ್ಕೂ ಹೆಚ್ಚಿನ‌ ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು ನಂತರ ಮಾಲಕರಿಗೆ ಎಚ್ಚರಿಕೆ ನೀಡಿ ಹಿಂದಿರುಗಿಸಿದರು.

Similar News