ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಟ್ರಸ್ಟಿ ನನ್ನೆ ಕಾಸೀಮ್ ಸಾಹೇಬ್ ನಿಧನ
Update: 2022-12-28 15:57 IST
ಉಡುಪಿ, ಡಿ.28: ಹೂಡೆಯ ಸಾಲಿಹಾತ್ ಸಮೂಹ ಸಂಸ್ಥೆಯ ಟ್ರಸ್ಟಿ ಕಾಸೀಮ್ ಸಾಹೇಬ್(65) ಬುಧವಾರ ನಿಧನರಾಗಿದ್ದಾರೆ.
ಎಸ್.ಐ.ಓ. ಹೂಡೆ ಘಟಕದ ಪ್ರಥಮ ಅಧ್ಯಕ್ಷರಾಗಿದ್ದ ಇವರು, ಮಹಮ್ಮದೀಯ ಎಜುಕೇಶನಲ್ ಟ್ರಸ್ಟ್ ಆರಂಭದಿಂದಲೂ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಆರು ಮಂದಿ ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಇಂದು(ಡಿ.28) ರಾತ್ರಿ 8 ಗಂಟೆ ಸುಮಾರಿಗೆ ಇಲ್ಲಿನ ಜದೀದ್ ಜಾಮಿಯಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.