×
Ad

ಮುಸ್ಲಿಂ ಯಂಗ್ ಮೆನ್ಸ್ 20ನೇ ವಾರ್ಷಿಕೋತ್ಸವ: ರಕ್ತದಾನ ಶಿಬಿರ

Update: 2022-12-28 16:16 IST

ಮುಲ್ಕಿ: ಮುಸ್ಲಿಂ ಯಂಗ್ ಮೆನ್ಸ್ (ರಿ) ಕಾರ್ನಾಡ್ ಇದರ 20ನೆ ವಾರ್ಷಿಕೋತ್ಸವದ ಪ್ರಯುಕ್ತ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಕಾರ್ನಾಡು ಮಸೀದಿಯಲ್ಲಿ ರವಿವಾರ ನಡೆಸಲಾಯಿತು.

ಕಾರ್ನಾಡು ಜುಮಾ ಮಸೀದಿಯ ಖತೀಬ್ ಇಸ್ಮಾಯಿಲ್ ದಾರಿಮಿ ಅವರು ದುವಾ ನಿರ್ವಹಿಸಿದರು. ಮುಲ್ಕಿ ಕೇಂದ್ರ ಜುಮಾ ಮಸೀದಿಯ ಖತೀಬ್ ಸಲೀಂ ಫೈಝಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಶಾಫಿ ಜುಮ್ಮಾ ಮಸೀದಿ ಆಡಳಿತ ಸಮಿತಿ ಮುಲ್ಕಿ ಇದರ ಅಧ್ಯಕ್ಷ ಜನಾಬ್ ಲಿಯಾಕತ್ ಆಲಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಡಾ. ಜಯನ್ ಭಟ್ ಅವರು ರಕ್ತದಾನದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ, ಕಾರ್ನಾಡ್ ಹಿಮಾಯಾತುಲ್ ಇಸ್ಲಾಂ ಸಮಿತಿಯ ಅಧ್ಯಕ್ಷ ಪುತ್ತುಬಾವ ಹಾಗೂ ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ, ಕಾರ್ನಾಡು ಜುಮಾ ಮಸೀದಿಯ ಮುದರ್ರಿಸ್ ಮುದ್ ಅಶ್ರಫ್ ಅಲ್ ಅಝ್ಹರಿ, ಮಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ರಿಯಾಝ್ ಮೊಯ್ದೀನ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಸದಸ್ಯರಾದ ತೌಸೀಫ್ ಕಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. 

Similar News