×
Ad

ತೋಕೂರು ಚರ್ಚ್‌ನಲ್ಲಿ ಕ್ರಿಸ್‌ಮಸ್ ಬಂಧುತ್ವ

Update: 2022-12-28 17:34 IST

ಮಂಗಳೂರು: ತೋಕೂರು  ಚರ್ಚ್‌ನಲ್ಲಿ ಕ್ರಿಸ್‌ಮಸ್ ಬಂಧುತ್ವ  ಕಾರ್ಯಕ್ರಮವು ರವಿವಾರ ನಡೆಯಿತು.ಚರ್ಚ್ ಧರ್ಮಗುರು ವಂ.ರೂಪೇಶ್ ಮಾಡ್ತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿಯಾಗಿ ಉದ್ಯಮಿ ವೆಂಕಟರತ್ನಂ, ಜೋಕಟ್ಟೆ ಗ್ರಾಪಂ ಅಧ್ಯಕ್ಷ ಉಮರ್ ಫಾರೂಕ್ ಭಾಗವಹಿಸಿದ್ದರು. ಈ ಸಂದರ್ಭ ನಕ್ಷತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷ ಜೆರಾಲ್ಡ್ ಡಿಸೋಜ, ಕಾರ್ಯದರ್ಶಿ ಗ್ರೆಟ್ಟಾ ವೇಗಸ್, ಐಸಿವೈಎಂ ಅಧ್ಯಕ್ಷ ಅಕಿಲ್, ಸಂತ ಅಂತೋಣಿ ಅಸೋಸಿಯೇಶನ್ ಅಧ್ಯಕ್ಷ ಹ್ಯಾಡ್ಲಿ ಡಿಸೋಜ, ವೈಸಿಎಸ್ ಅಧ್ಯಕ್ಷೆ  ಝೀನಾ ವೇಗಸ್ ಉಪಸ್ಥಿತರಿದ್ದರು.

Similar News