ಅಡಕೆ ಮರದಿಂದ ಬಿದ್ದು ಸಾವು
Update: 2022-12-29 18:05 IST
ಪುತ್ತೂರು: ಅಡಕೆ ಕೀಳುತ್ತಿದ್ದ ವೇಳೆಯಲ್ಲಿ ಅಡಕೆ ಮರ ತುಂಡಾದ ಕಾರಣ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕೊರ್ಬಂಡ್ಕ ಎಂಬಲ್ಲಿ ನಡೆದಿದೆ.
ಕೊಂರ್ಬಡ್ಕ ದೊಡ್ಡಮನೆ ನಿವಾಸಿ ಚಂದ್ರಶೇಖರ ಗೌಡ (56) ಮೃತಪಟ್ಟ ವ್ಯಕ್ತಿ. ಅವರು ತನ್ನ ತೋಟದಲ್ಲಿ ಅಡಕೆ ಮರಕ್ಕೆ ಹತ್ತಿ ಅಡಕೆ ಕೀಳುತ್ತಿದ್ದ ವೇಳೆಯಲ್ಲ ಮರ ತುಂಡಾದ ಪರಿಣಾಮ ಕೆಳಕ್ಕೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಗಂಭೀರ ಗಾಗಯೊಂಡಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಸಹೋದರ, ಸಹೋದರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.