×
Ad

ಮಹಿಳೆಗೆ ಹಲ್ಲೆ ಆರೋಪ: ದೂರು ದಾಖಲು

Update: 2022-12-29 18:08 IST

ಪುತ್ತೂರು:  ಕೃಷಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಹಿಳೆಯೋರ್ವರಿಗೆ ಆಕೆಯ ಸಹೋದರ ಮತ್ತು ಇತರರು ಹಲ್ಲೆ ನಡೆಸಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಹಲ್ಲೆಗೊಳಗಾದ ಮಹಿಳೆಯು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 

ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಡಿಂಬ್ರಿ ಎಂಬಲ್ಲಿನ ನಿವಾಸಿ ಶಂಕರ್ ಭಂಡಾರಿ ಎಂಬವರ ಪತ್ನಿ ಆಶಾ ಶಂಕರ್ ಭಂಡಾರಿ(54) ಗಾಯಗೊಂಡ ಮಹಿಳೆ. ಅವರು ದ.27ರಂದು ಕುರಿಯದಲ್ಲಿರುವ ತನ್ನ ಕೃಷಿ ಜಾಗದಲ್ಲಿದ್ದ ವೇಳೆ ಅವರ ಸಹೋದರ ಅರುಣ್ ಕುಮಾರ್ ರ್ಯ  ಮತ್ತು ಕೆಲಸಗಾರರಾದ ವಿನಯ ಮತ್ತು ಸುಂದರ ಎಂಬವರು ಅಕ್ರಮವಾಗಿ ಪ್ರವೇಶ ಮಾಡಿ ತನಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Similar News