ದಿಲ್ಲಿ ಗಣರಾಜ್ಯೋತ್ಸವ ಪೆರೇಡ್‍ಗೆ ಪುತ್ತೂರಿನ ದೇವಿಕಾ ಆಯ್ಕೆ
Update: 2022-12-29 18:42 IST
ಪುತ್ತೂರು: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಪೆರೆಡ್‍ಗೆ ಪುತ್ತೂರು ವಿವೇಕಾನಂದ ವಿದ್ಯಾಲಯದ ಪ್ರಥಮ ಬಿಕಾಂ ವಿದ್ಯಾರ್ಥಿನಿ ಎನ್‍ಸಿಸಿ ಜೂನಿಯರ್ ಅಂಡರ್ ಆಫೀಸರ್ ದೇವಿಕಾ ಅವರು ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಅಕ್ಟೋಬರ್ ನಿಂದ ಡಿಸೆಂಬರ್ ತನಕ ರಾಜ್ಯದ ವಿವಿಧ ಕಡೆ ನಡೆದ 6 ಪೂರ್ವ ಸಿದ್ದತಾ ಸುತ್ತನ್ನು ಯಶಸ್ವಿಯಾಗಿ ಪೂರೈಸಿರುವ ಅವರು ಕರ್ನಾಟಕ ಮತುತ ಗೋವಾ ಡೈರೆಕ್ಟರೇಟ್‍ನ ಮಡಿಕೇರಿ ಬೆಟಾಲಿಯನ್‍ನ ಪ್ರತಿನಿಧಿಯಾಗಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೆಡ್‍ನಲ್ಲಿ ಭಾಗವಹಿಸಲಿದ್ದಾರ. ವಿವೇಕಾನಂದ ಕಾಲೇಜ್‍ನ ಎನ್‍ಸಿಸಿ ಅಧಿಕಾರಿ ಲೆ. ಬಾಮಿ ಅತುಲ್ ಶೆಣೈ ಮಾರ್ಗದರ್ಶನ ನೀಡಿದ್ದರು.
ದೇವಿಕಾ ಅವರು ಸುಳ್ಯ ತಾಲೂಕಿನ ಬೆಳ್ಳಾರೆಯ ಉದಯಶಂಕರ್ ಕುರಿಯಾಜೆ ಮತ್ತು ವಸಂತಲಕ್ಷ್ಮೀ ದಂಪತಿಯ ಪುತ್ರಿ.