ಕೋವಿಡ್ ತುರ್ತು ಚಿಕಿತ್ಸಾ ಕೇಂದ್ರದಲ್ಲಿ BJP ಜಾಹೀರಾತು: ಸಾಮಾಜಿಕ ಕಾರ್ಯಕರ್ತರಿಂದ BBMP ಆಯುಕ್ತರಿಗೆ ದೂರು

Update: 2022-12-29 16:30 GMT

ಬೆಂಗಳೂರು, ಡಿ.29: ಸರಕಾರದ ಅನುದಾನದ ಅಡಿಯಲ್ಲಿ ಕೋವಿಡ್ ತುರ್ತು ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಆದರೆ, ಚಿಕಿತ್ಸಾ ಕೇಂದ್ರವನ್ನು ಬಿಜೆಪಿ ಪಕ್ಷದ ಕಚೇರಿಯಂತೆ ಜಾಹೀರಾತು ಪ್ರಕಟಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುಭಾಷ್ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿದ್ದಾರೆ. 

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಯಶವಂತಪುರ ವಾರ್ಡ್‍ನಲ್ಲಿ ಕೋವಿಡ್ ಸಂದರ್ಭದಲ್ಲಿ ಚಿಕಿತ್ಸೆ ಕೇಂದ್ರವನ್ನು ನಿರ್ಮಿಸಲಾಗಿತ್ತು. ಅದರ ಮುಂಭಾಗದ ಗೋಡೆಯ ಮೇಲೆ ಬಿಜೆಪಿ ಪಕ್ಷದ ಶಾಸಕರಾಗಿರುವ ಮುನಿರತ್ನ ನಾಯ್ಡು ಎಲ್.ಇ.ಡಿ. ರನ್ನಿಂಗ್ ಬೋರ್ಡ್ ಅಳವಡಿಸಿದ್ದಾರೆ. ಬೋರ್ಡ್‍ನ್ನು  ತಮ್ಮ ಪಕ್ಷದ ಪ್ರಚಾರದ ಸ್ವತ್ತಾಗಿ ಮಾರ್ಪಡಿಸಿಕೊಂಡಿದ್ದು, ಮೋದಿ, ಅಮಿತ್ ಶಾ, ಬಸವರಾಜ ಬೊಮ್ಮಾಯಿ ಭಾವಚಿತ್ರಗಳನ್ನು ಎಲ್‍ಇಡಿ ಬೋರ್ಡ್ ನಲ್ಲಿ ಪ್ರಕಟಿಸಲಾಗುತ್ತಿದೆ ಆರೋಪಿಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ಸಾರ್ವಜನಿಕ ಸೇವೆಗಾಗಿ ನಿರ್ಮಿಸುವ ಯಾವುದೇ ಕಟ್ಟಡವಾಗಲಿ, ಆಸ್ಪತ್ರೆಗಳಾಗಲಿ, ಇವೆಲ್ಲವೂ ಸಾರ್ವಜನಿಕ ಸ್ವತ್ತ ವಿನಹ ಯಾವುದೇ ಪಕ್ಷದ ಸ್ವತ್ತಾಗಿರುವುದಿಲ್ಲ. ಹೀಗಾಗಿ ತಾವು ಈ ಕೂಡಲೇ ಈ ಬೋರ್ಡ್ ಗಳನ್ನು ತೆರವು ಗೊಳಸಿ, ಸಾರ್ವಜನಿಕ ಆಸ್ತಿಯಾದ ಕೋವಿಡ್ ತುರ್ತು ಚಿಕಿತ್ಸಾ ಕೇಂದ್ರವನ್ನು" ಬಿಜೆಪಿಯ ಕಚೇರಿಯಾಗದಂತೆ ಜಾಗ್ರತೆ ವಹಿಸಿ ತೆರವುಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ. 

Similar News