×
Ad

ರಾಜ್ಯ ರಾಜಧಾನಿಯಲ್ಲಿ ಶೀತ ಜ್ವರ ಹೆಚ್ಚಳ

Update: 2022-12-29 23:31 IST

ಬೆಂಗಳೂರು, ಡಿ.29: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಚಳಿ ಹಾಗೂ ಹವಾಮಾನದಲ್ಲಿನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ಶೀತಜ್ವರ ಹಾಗೂ ಉಸಿರಾಟದ ಸಮಸ್ಯೆ ಪ್ರಕರಣಗಳು ಹೆಚ್ಚಳವಾಗಿವೆ. 

ಹವಾಮಾನ ವೈಪರೀತ್ಯದಿಂದ ಶೀತಜ್ವರ ಮತ್ತು ಉಸಿರಾಟದ ಸಮಸ್ಯೆ ಪ್ರಕರಣಗಳಲ್ಲಿ ಶೇ. 15 ರಷ್ಟು ಹೆಚ್ಚಳವಾಗಿದೆ. ಶೀತಜ್ವರ ಹಾಗೂ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರಿಗೆ ರಾಜೀವ್‍ಗಾಂಧಿ ಎದೆರೋಗ ಸಂಸ್ಥೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ನಿತ್ಯ ಸಂಸ್ಥೆಗೆ 200ಕ್ಕೂ ಅಧಿಕ ಹೊರ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಇವರಲ್ಲಿ ಶೇ. 50ರಷ್ಟು ಮಂದಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರಾಗಿದ್ದಾರೆ.

Similar News