ಮುಂದಿನ ವಾರದಿಂದ ವೋಲ್ವೊ ಬಸ್ ಪಾಸ್ ದರ ದುಬಾರಿ

Update: 2022-12-30 14:46 GMT

ಬೆಂಗಳೂರು, ಡಿ.30: ಏರಿಕೆಯಾಗುತ್ತಿರುವ ಇಂಧನ ದರ ಹಿನ್ನೆಲೆಯಲ್ಲಿ ವೊಲ್ವೊ ಬಸ್ ಪಾಸ್ ದರವನ್ನು ಹೆಚ್ಚಳ ಮಾಡಲಾಗಿದ್ದು, ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರವನ್ನು ಬಿಎಂಟಿಸಿ ಹೆಚ್ಚಳ ಮಾಡಿದೆ.

ಬಿಎಂಟಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅದನ್ನು ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ಮಾಸಿಕ ಪಾಸ್ ಪಡೆದವರಿಗೆ ಮತ್ತೊಂದು ಶಾಕ್ ನೀಡಿದ್ದು, ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ರವಿವಾರ ಪಾಸ್ ಬಳಸಿ ಉಚಿತ ಪ್ರಯಾಣ ಮಾಡುವಂತಿಲ್ಲ.

ವಾಯುವಜ್ರದ ಮಾಸಿಕ ದರ 1.428 ಹಾಗೂ ಜಿಎಸ್‍ಟಿ 72, 1,500 ರೂ.ಗಳಿಂದ ಈಗ ವಜ್ರ ಮಾಸಿಕ ಪಾಸಿನ ದರ 1,714.29 ಪೈಸೆ ಹಾಗೂ ಜಿಎಸ್‍ಟಿ 85.71 ಒಟ್ಟು 1,800 ರೂ.ಗೆ ಏರಿಕೆಯಾಗಿದೆ. ವಜ್ರ, ವೊಲ್ವೊ ದಿನದ ಪಾಸ್‍ನ ದರ 95 ಹಾಗೂ 5 ರೂ. ಜಿಎಸ್‍ಟಿ ಸೇರಿದಂತೆ 100 ರೂ. ಇತ್ತು. ಈಗ ಈ ದರವನ್ನು ಪರಿಷ್ಕರಿಸಲಾಗಿದ್ದು, 114.29 ಹಾಗೂ 5.21 ಜಿಎಸ್‍ಟಿ ಸೇರಿದಂತೆ ಈಗ ಪ್ರತಿದಿನದ ಪಾಸ್ ದರ 125 ರೂ.ಗೆ ಹೆಚ್ಚಳ ಮಾಡಲಾಗಿದೆ.

Similar News