ಮಂಗಳೂರು: ಪೋಪ್ ನಿಧನಕ್ಕೆ ಮಂಗಳೂರು ಬಿಷಪ್ ಸಂತಾಪ

Update: 2022-12-31 14:11 GMT

ಮಂಗಳೂರು: ಕೆಥೋಲಿಕ್ ಕ್ರೈಸ್ತರ ನಿವೃತ್ತ ಪರಮಗುರು ಪೋಪ್ ಬೆನೆಡಿಕ್ಟ್ 16 ಅವರ ನಿಧನಕ್ಕೆ ಮಂಗಳೂರಿನ ಬಿಷಪ್ ಅತಿ ವಂದನೀಯ ಪೀಟರ್ ಪಾವ್ಲ್ ಸಲ್ದಾನ ಅವರು ಮಂಗಳೂರು ಧರ್ಮಪ್ರಾಂತದ ಸಮಸ್ತ ಕೆಥೋಲಿಕ್ ಕ್ರೈಸ್ತರ ಪರವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರ ಗೌರವಾರ್ಥ ಇಂದು ಎರಡು ಬಾರಿ ಹಾಗೂ ನಾಳೆ ಮತ್ತು ಅಂತ್ಯ ಸಂಸ್ಕಾರ ನಡೆಯುವ ದಿನದಂದು ದಿನಕ್ಕೆ ತಲಾ ಮೂರು ಬಾರಿ ಚರ್ಚ್ ಗಂಟೆ ಬಾರಿಸುವಂತೆ ಸೂಚನೆ ನೀಡಿದ್ದಾರೆ.

ಪೋಪ್ ಬೆನೆಡಿಕ್ಟ್ ಅವರ ಪಾರ್ಥಿವ ಶರೀರದ ಅಂತ್ಯವಿಧಿಗಳು ಜ.5ರಂದು ರೋಮ್‌ನ ಸೈಂಟ್ ಪೀಟರ್ ಸ್ಕ್ವೇರ್‌ನಲ್ಲಿ ಬೆಳಗ್ಗೆ 9:30ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆ) ನಡೆಯಲಿದೆ. ಇಂದು ಮತ್ತು ನಾಳೆ ಆರಾಧನೆಯ ಸಂದರ್ಭ ಪೋಪ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಪೋಪ್ ಬೆನೆಡಿಕ್ಟ್ ಹೆಸರಾಂತ ದೇವ ಶಾಸತ್ರಜ್ಞರು ಮತ್ತು  ವಿದ್ವಾಂಸರಾಗಿದ್ದರು. ಅವರು ಅನೇಕ ಲೇಖನಗಳನ್ನು ಕೂಡ ಬರೆದಿದ್ದರು. ಪರಿಸರ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ದೇವರ ಮೇಲೆ ಅಪಾರ ಪ್ರೀತಿ ಮತ್ತು ವಿಶ್ವಾಸ ಹೊಂದಿದ್ದರು. ಅವರ ನಿಧನದಿಂದಾಗಿ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ ಎಂದು ಬಿಷಪ್ ಪೀಟರ್ ಪಾವ್ಲ್ ಸಲ್ದಾನ ತಿಳಿಸಿದ್ದಾರೆ.

Similar News