ಸಿನೆಮಾಗಳಲ್ಲಿ ಅನವಶ್ಯಕ ಕೇಸರಿ ಬಟ್ಟೆ ಯಾಕೆ: ಬಿ.ಎಲ್.ಸಂತೋಷ್ ಪ್ರಶ್ನೆ

Update: 2022-12-31 18:44 GMT

ಬೆಂಗಳೂರು, ಡಿ.31: ಸಿನೆಮಾಗಳಲ್ಲಿ ಅನವಶ್ಯಕವಾಗಿ ಯಾಕೆ ಕೇಸರಿ ಬಟ್ಟೆ ಬಳಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರಶ್ನಿಸಿದ್ದಾರೆ.

ಶನಿವಾರ ಸ್ಪಿರಿಟ್ ಆಫ್ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಸರಿ ಬಿಕಿನಿ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ. ನಮ್ಮವರೊಬ್ಬರು ಸಿನೆಮಾ ಸರ್ಟಿಫಿಕೇಷನ್ ಕಮಿಟಿಯಲ್ಲಿ ಇದ್ದರು. ಚಿತ್ರದಲ್ಲಿ ಅತ್ಯಾಚಾರ ಮಾಡುವ ಇನ್ಸ್ಪೆಕ್ಟರ್ ಕೇಸರಿ ಶಾಲು ಹಾಕಿದ್ದ. ಸಿನೆಮಾ ನೋಡುವಾಗ ಕೇಸರಿ ಶಾಲು ಯಾಕೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ಆ ಸಿನೆಮಾ ನಿರ್ದೇಶಕ ಟೇಕ್ ಇಟ್ ಈಸಿ ಎಂದು ಹೇಳಿದ್ದರು. ಕೇಸರಿ ಬಗ್ಗೆಯೇ ಟೇಕ್ ಇಟ್ ಈಸಿ ಯಾಕೆ, ಬೇರೆ ಬಣ್ಣ ಯಾಕಿಲ್ಲ, ಪೊಲೀಸರನ್ನು ಕೆಟ್ಟವರೆಂದು ತೋರಿಸಬೇಕಿದ್ದರೆ ಅಷ್ಟು ಮಾತ್ರ ತೋರಿಸಿ. ಅದಕ್ಕೆ ಕೇಸರಿ ಶಾಲು ಹಾಕಿ ಯಾಕೆ ತೋರಿಸುವುದು ಎಂದು ಬಿ.ಎಲ್ ಸಂತೋಷ್ ಕಿಡಿಕಾರಿದರು.

ಸಿನೆಮಾ ಮೂಲಕ ನರೇಟಿವ್ ಕಂಟ್ರೋಲ್ ಮಾಡುವುದಕ್ಕೆ ಪ್ರಯತ್ನ ಮಾಡಿದರು. ಇಡೀ ದೇಶದಲ್ಲಿ ಅವಾರ್ಡ್‍ಗಳನ್ನೂ ಕೂಡ ಕೆಲವರು ಕಂಟ್ರೋಲ್ ಮಾಡುವುದಕ್ಕೆ ಪ್ರಯತ್ನ ಪಟ್ಟರು. ನೆಹರೂ ಲೆಫ್ಟ್ ಆ್ಯನ್ ಲೆಗಸಿ, ನೆಹರೂ ಬಗ್ಗೆ ಆಕ್ಷೇಪ ಇಲ್ಲ. ಆದರೆ ಅವರು ಬಿಟ್ಟು ಹೋದ ಲೆಗಸಿ ನಮ್ಮ ದೇಶದ ನರೇಟಿವ್ ಕಂಟ್ರೋಲ್ ಮಾಡಿತ್ತು. ನಮ್ಮ ದೇಶಕ್ಕೆ ಮಾನವೀಯತೆಯೇ ಇಲ್ಲ ಎಂತಲೂ ಅವರು ಹೇಳಿದ್ದರು. ಕೆಲವರು ಬ್ರಿಟಿಷರನ್ನೇ ತಮ್ಮ ಪೂರ್ವಜರು ಅಂದುಕೊಂಡವರು ಇದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರು: ಹೊಸ ವರ್ಷ ರಾತ್ರಿ ಮದ್ಯ ಸೇವಿಸಿ ರಸ್ತೆಯಲ್ಲಿ ಬಿದ್ದವರಿಗೆ ಪೊಲೀಸರಿಂದಲೇ ಆ್ಯಂಬುಲೆನ್ಸ್ ಸೇವೆ

Similar News