ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳಿಂದ 80 ಲಕ್ಷ ರೂ. ಕಸಿದು ಪರಾರಿ
Update: 2023-01-02 18:23 IST
ಬೆಂಗಳೂರು, ಜ.1: ಪೊಲೀಸ್ ಸಿಬ್ಬಂದಿಯ ಸೋಗಿನಲ್ಲಿ ಬಂದ ದುಷ್ಕರ್ಮಿಗಳು 80 ಲಕ್ಷ ರೂಪಾಯಿ ಕಸಿದು ಪರಾರಿಯಾಗಿರುವ ಘಟನೆ ಇಲ್ಲಿನ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಡಿಕೆ ವ್ಯಾಪಾರದಲ್ಲಿ ಬಂದ ಆದಾಯವನ್ನು ಮಾಲಕ ಮೋಹನ್ ಎಂಬವರ ಸೂಚನೆಯಂತೆ ಡಿ.27 ರಂದು ಕುಮಾರಸ್ವಾಮಿ ಹಾಗೂ ಚಾಲಕ ಚಂದನ್ ಕಾರಿನಲ್ಲಿ ಕೊಂಡೊಯ್ಯುತ್ತಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಕೆಎಚ್ ರಸ್ತೆಯ ರಿವೋಲಿ ಜಂಕ್ಷನ್ ಬಳಿ ಸಿಗ್ನಲ್‍ನಲ್ಲಿ ಕಾರು ನಿಲ್ಲಿಸಿದ್ದರು.ಈ ಸಂದರ್ಭದಲ್ಲಿ ಪೊಲೀಸ್ ಹೆಸರಿದ್ದ ಕಾರಿನಿಂದ ಇಳಿದ ಮೂವರು ಅಪರಿಚಿತರು ತಾವು ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ.
ಬಳಿಕ ಕಾರುಹತ್ತಿ ತೆಲುಗು ಭಾಷೆಯಲ್ಲಿ ಅವರವರೇ ಮಾತನಾಡಿಕೊಂಡು ಲಾಠಿ ತೋರಿಸಿ ಬೆದರಿಸಿ 80 ಲಕ್ಷ ರೂ.ಹಣ ಪಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.