×
Ad

ಬೆಂಗಳೂರು: ಮಹಿಳಾ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಆರೋಪ; ಪ್ರಕರಣ ದಾಖಲು

Update: 2023-01-02 18:32 IST

ಬೆಂಗಳೂರು, ಜ. 2: ಇಲ್ಲಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿದ್ದ ಸಿಐಎಸ್‍ಎಫ್ ಮಹಿಳಾ ಇನ್ಸ್‌ಪೆಕ್ಟರ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಮದ್ಯದ ಅಮಲಿನಲ್ಲಿ ಪ್ರಯಾಣಿಕನೋರ್ವ ಡಿ.25ರಂದು ಬೆಂಗಳೂರಿನಿಂದ ಕೊಚ್ಚಿನ್‍ಗೆ ಪ್ರಯಾಣ ಬೆಳಸಿದ್ದು, ಈ ವೇಳೆ ಗ್ರೀನ್ ಕಾರ್ಡ್ ಕಳೆದಿರುವ ಬಗ್ಗೆ ಭದ್ರತಾ ವಿಭಾಗದ ಸಿಐಎಸ್‍ಎಫ್ ಮಹಿಳಾ ಇನ್ಸ್‌ಪೆಕ್ಟರ್ ಧನೇಶ್ವರಿ ಕುಟ್ಟಾಮ್‍ಗೆ ತಿಳಿಸಿದ್ದಾನೆ.

ಆನಂತರ, ಲಿಖಿತ ದೂರು ನೀಡುವಂತೆ ಸೂಚಿಸಿದಾಗ, ದಾಖಲೆಗಳನ್ನು ಮಹಿಳಾ ಅಧಿಕಾರಿಯ ಮೇಲೆ ಎಸೆದು ಕಿರಿಚಾಡಿದ್ದಾರೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ, ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News