ಅಂತಾರಾಷ್ಟ್ರೀಯ ಮಟ್ಟದ ಕರಾಟೆ: ಮೂಡಬಿದ್ರೆಯ ಅಲ್ ಪುರ್ಖಾನ್ ಶಾಲೆಗೆ ಎರಡು ಪ್ರಶಸ್ತಿ

Update: 2023-01-02 16:31 GMT

ಮಂಗಳೂರು: ಮಹಾರಾಷ್ಟ್ರದ ಪುಣೆಯನೇತಾಜಿ ಸುಭಾಸ್ ಚಂದ್ರ ಬೋಸ್ ಮಿಲಿಟರಿ ಸ್ಕೂಲ್ ಸ್ಟೇಡಿಯಂ ನಲ್ಲಿ ಇತ್ತೀಚೆಗೆ ನಡೆದ ನ್ಯಾಷನಲ್ ಕರಾಟೆ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೂಡುಬಿದಿರೆಯ Al Furqan Islamic ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಅಪ್ಲಾ ಅಮನ್ ಶಾಫಿ 13 ವರ್ಷ ವಯೋಮಿತಿಯ 55 ಕೆಜಿ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಮಹಮ್ಮದ್ ನೂಹ್ 12 ವರ್ಷ ವಯೋಮಿತಿ ಯ 40 ಕೆಜಿ ಕುಮಿಟೆ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ.

ವಿದ್ಯಾರ್ಥಿಗಳು ರೆನ್ಸಿ ಮುಹಮ್ಮದ್ ನದೀಮ್ ರಿಂದ ತರಬೇತಿ ಪಡೆಯುತ್ತಿದ್ದಾರೆ. ಈ ಚಾಂಪಿಯನ್ ಶಿಪ್ ನಲ್ಲಿ ನೇಪಾಳ, ಭೂತನ್, ಶ್ರೀಲಂಕಾ, ಬಾಂಗ್ಲಾದೇಶ,ಇಂಡಿಯಾ ರಾಷ್ಟ್ರ ಗಳು ಭಾಗವಹಿಸಿತು.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೆಯರ್ ಮ್ಯಾನ್, ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಶ್ಲಾಘಿಸಿದ್ದಾರೆ.

Similar News