BBMP ಅಧಿಕಾರಿ ಸೇರಿ ಮೂವರು ಲೋಕಾಯುಕ್ತ ಬಲೆಗೆ

Update: 2023-01-03 15:29 GMT

ಬೆಂಗಳೂರು, ಜ.3: ವಾಣಿಜ್ಯ ಸಂಕೀರ್ಣಕ್ಕೆ ಒಸಿ ನೀಡುವ ಜೊತೆಗೆ ಅಧಿಕೃತ ಶುಲ್ಕದ ಮೊತ್ತ ಕಡಿಮೆ ಮಾಡಲು 26 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಬಿಬಿಎಂಪಿ ಅಧಿಕಾರಿ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಬಿಬಿಎಂಪಿ ಬೊಮ್ಮನಹಳ್ಳಿ ವಿಭಾಗದ ಎಡಿಟಿಪಿ ಪಟ್ಟಣಶೆಟ್ಟಿ, ಎಫ್ ಡಿಎ ಕೃಷ್ಣ ಹಾಗೂ ಖಾಸಗಿ ಏಜೆಂಟ್ ರವಿ ಬಂಧಿತರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ವಾಣಿಜ್ಯ ಸಂಕೀರ್ಣಕ್ಕೆ ಒಸಿ ನೀಡಲು ಅಧಿಕೃತ ಶುಲ್ಕದ ಮೊತ್ತವನ್ನು ಕಡಿಮೆ ಮಾಡಲು ಕಟ್ಟಡ ಮಾಲಕರಿಂದ 26 ಲಕ್ಷ ರೂ.ಲಂಚಕ್ಕೆ ಆರೋಪಿಗಳು ಬೇಡಿಕೆಯಿಟ್ಟಿದ್ದರು.

ಈ ಸಂಬಂಧ ದಾಖಲಾದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರ ತಂಡ, ಆರೋಪಗಳು ಏಜೆಂಟ್ ರವಿ ಮೂಲಕ‌ ಹಣ ಪಡೆಯುತ್ತಿದ್ದ ವೇಳೆ ಸೆರೆ ಹಿಡಿದ್ದಾರೆ.

Similar News