×
Ad

ಮಂಗಳೂರು: ಪೊಲೀಸ್ ಶ್ವಾನದಳದ ಜ್ವಾಲಾ ಸಾವು

Update: 2023-01-03 22:28 IST

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಈ ಹಿಂದೆ ನಡೆದ ಹಲವು ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಆರೋಪಿಗಳ ಪತ್ತೆಗೆ ಸಹಕರಿಸುತ್ತಿದ್ದ ಶ್ವಾನದಳದ ಸದಸ್ಯೆ ಜ್ವಾಲಾ ಮಂಗಳವಾರ ಬೆಳಗ್ಗೆ ಕಿಡ್ನಿ ವೈಫಲ್ಯಕ್ಕೊಳಗಾಗಿ ಸಾವಿಗೀಡಾಗಿದೆ.

ದ.ಕ. ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಮೈದಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಬಿಳಿ ವಸ್ತ್ರದಲ್ಲಿ ಶ್ವಾನದ ಮೃತದೇಹವನ್ನು ಸುತ್ತಿ, ಹೂವಿನಿಂದ ಅಲಂಕರಿಸಿ ಪೊಲೀಸ್ ವಾದ್ಯ, ಕುಶಾಲ ತೋಪು ಸಿಡಿಸುವ ಮೂಲಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆ ಮತ್ತಿತರ ಅಧಿಕಾರಿ, ಸಿಬ್ಬಂದಿಯ ಸಮ್ಮುಖ ಗೌರವ ವಂದನೆ ಸಲ್ಲಿಸಲಾಯಿತು.

ಡಾಬರ್‌ಮೆನ್ ಪಿಂಚರ್ ಜಾತಿಗೆ ಸೇರಿದ ಜ್ವಾಲಾ 2015ರ ಫೆ.27ರಂದು ಜನಿಸಿತ್ತು. ಅಪರಾಧ ಪತ್ತೆ ಶ್ವಾನವಾಗಿ ಪೊಲೀಸ್ ಇಲಾಖೆಯಲ್ಲಿ 7ವರ್ಷ 10 ತಿಂಗಳು ಕರ್ತವ್ಯ ನಿರ್ವಹಿಸಿತ್ತು. ಪೊಲೀಸ್ ಇಲಾಖೆಯ ಕುಮಾರ ಕತ್ಲೇರ ಈ ಶ್ವಾನದ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

Similar News