×
Ad

ಜ.8ರ ಜನಸಾಹಿತ್ಯ ಸಮ್ಮೇಳನದಲ್ಲಿ “ಧೀರ ಟಿಪ್ಪುವಿನ ಲಾವಣಿಗಳು” ಪುಸ್ತಕ ಬಿಡುಗಡೆ

Update: 2023-01-03 23:16 IST

ಬೆಂಗಳೂರು, ಜ.3: ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಕುರಿತು ವ್ಯಾಪಕವಾಗಿ ಜನಜನಿತವಾಗಿದ್ದ ಜಾನಪದ ಹಾಡುಗಳ ಪ್ರಕಾರದ ಲಾವಣಿಗಳನ್ನು ಖ್ಯಾತ ಸಾಹಿತಿ ಲಿಂಗದೇವರು ಹಳೆಮನೆ ಸಂಪಾದಿಸಿ “ಧೀರ ಟಿಪ್ಪುವಿನ ಲಾವಣಿಗಳು” ಪುಸ್ತಕವನ್ನು ಹೊರತಂದಿದ್ದು, ಅದರ ಎರಡನೇ ಆವೃತ್ತಿ ಜ.8ರಂದು ಬೆಂಗಳೂರಿನ ಅಲುಮ್ನಿ ಸಭಾಂಗಣದಲ್ಲಿ ನಡೆಯುವ ಜನಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ.

ಪುಸ್ತಕದಲ್ಲಿ ಲೇಖಕರು ಟಿಪ್ಪು ಸುಲ್ತಾನ್ ಕುರಿತ ಆರು ಲಾವಣಿಗಳನ್ನು ಸಂಗ್ರಹಿಸಿದ್ದಲ್ಲದೆ, ಲಾವಣಿಗಳ ಚರಿತ್ರೆ, ಮಹತ್ವ ಮತ್ತು ಟಿಪ್ಪು ಸುಲ್ತಾನನ ಸುತ್ತ ವಿವಾದಗಳ ಕುರಿತು ದೀರ್ಘವಾದ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದಾರೆ. ಖ್ಯಾತ ಸಾಂಸ್ಕೃತಿಕ ಚಿಂತಕ ಪ್ರೊ.ಪುರುಷೋತ್ತಮ ಬಿಳಿಮಲೆ ಎರಡನೇ ಆವೃತ್ತಿಗೆ ಮುನ್ನುಡಿ ಬರೆದಿದ್ದು, ಲೇಖಕ  ಪ್ರೊ.ರಹಮತ್ ತರೀಕೆರೆ ವಿಶಿಷ್ಟ ಒಳನೋಟಗಳಿರುವ ಬೆನ್ನುಡಿಯನ್ನು ಬರೆದಿದ್ದಾರೆ.

Similar News