ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ: BJP ಶಾಸಕ ಲಿಂಬಾವಳಿಗೆ ಸಂಕಷ್ಟ
Update: 2023-01-04 18:14 IST
ಬೆಂಗಳೂರು, ಜ. 4: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಕಗ್ಗಲಿಪುರ ಠಾಣಾ ಪೊಲೀಸರು, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Arvind Limbavali) ಸೇರಿದಂತೆ ಐವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಗ್ಗಲೀಪುರ ಠಾಣಾ ಪೊಲೀಸರು ನೊಟೀಸ್ ನೀಡಿದ್ದಾರೆ.
ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಪೊಲೀಸರಿಗೆ ಆತ್ಮಹತ್ಯೆಗೂ ಮುನ್ನ ಪ್ರದೀಪ್ ಬರೆದಿಟ್ಟಿದ್ದ ಮೂರು ಡೆತ್‍ನೋಟ್‍ಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಪ್ರದೀಪ್ ಪತ್ನಿಯನ್ನು ಪೊಲೀಸರು ವಿಚಾರಣೆಗೊಳಪಡಿಸಲು ಮುಂದಾಗಿದ್ದಾರೆ.
ಇನ್ನೂ, 2022ರ ಮೇನಲ್ಲಿ ಬೆಳ್ಳಂದೂರು ಠಾಣೆಗೆ ಪತಿ ವಿರುದ್ದ ನಮಿತಾ ದೂರು ನೀಡಿದ್ದರು. ಪ್ರದೀಪ್ ಪಿಸ್ತೂಲಿನಿಂದ ಸಾಯಿಸುವುದಾಗಿ ಬೆದರಿಸುತ್ತಾನೆಂದು ದೂರು ನೀಡಿದ್ದರು. ಆಗ ಶಾಸಕ ಅರವಿಂದ ಲಿಂಬಾವಳಿಯ ಸಹಾಯವನ್ನು ಪ್ರದೀಪ್ ಕೋರಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.