ಬೆಂಗಳೂರು: ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ

Update: 2023-01-04 14:43 GMT

ಬೆಂಗಳೂರು (Bengaluru), ಜ.4: ಇಲ್ಲಿನ ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ಇರಿಸಲಾಗಿದ್ದ ಕ್ಯಾನ್‍ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದ್ದು, ಈ ಸಂಬಂಧ ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಧವಾರ ಇಲ್ಲಿನ ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ 1ರಲ್ಲಿ ಬಾಕ್ಸ್ ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಯುವತಿಯ ಮೃತ ದೇಹವನ್ನು ಪತ್ತೆಯಾಗಿದ್ದು, ಆನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಯುವತಿಯ ಗುರುತು ಹಚ್ಚುವ ಕಾರ್ಯ ನಡೆಯುತ್ತಿದೆ. ಅಂದಾಜು 23 ವರ್ಷದ ಯುವತಿಯೊಬ್ಬರ ಶವ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಶವವನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶವದ ಕುತ್ತಿಗೆಯಲ್ಲಿ ಬಿಳಿ ಬಣ್ಣದ ದುಪ್ಪಟ್ಟದಿಂದ ಗಂಟು ಬಿಗಿದಿರುವುದು, ಶವ ಕೊಳೆಯಲು ಡ್ರಮ್‍ನಲ್ಲಿ ಕೆಮಿಕಲ್ ಸುರಿದಿರುವುದು ಗೊತ್ತಾಗಿದೆ ಎಂದು ಬೆಂಗಳೂರು ವಿಭಾಗದ ರೈಲ್ವೇ ಅಧಿಕಾರಿ ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ.

Similar News