×
Ad

ದೇರಳಕಟ್ಟೆ: ಮಜ್ಲಿಸುನ್ನೂರ್, ತಹ್ಲೀಲ್, ಬೀಳ್ಕೊಡುಗೆ, ಅಭಿನಂದನಾ ಸಮಾರಂಭ

Update: 2023-01-06 19:46 IST

ದೇರಳಕಟ್ಟೆ: ದೇರಳಕಟ್ಟೆ ಗ್ರೀನ್‍ಗ್ರೌಂಡ್ ಮನಾರುಲ್‍ಹುದಾ ಮಸೀದಿಯ ಆಶ್ರಯದಲ್ಲಿ ಮಾಸಿಕ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಕಾರ್ಯಕ್ರಮ ಹಾಗೂ  ಇತ್ತೀಚೆಗೆ ಮರಣ ಹೊಂದಿದ ಸಮಸ್ತ ಮದ್ರಸ ಮ್ಯಾನೇಜ್‍ಮೆಂಟ್ ದ.ಕ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮರ್‍ಹೂಮ್ ನೌಶಾದ್ ಹಾಜಿ ಸೂರಲ್ಪಾಡಿ ಹಾಗೂ ಇವರ ಸಹಾಯಕರಾಗಿದ್ದ ಚಾಲಕ  ಮುಷರ್ರಫ್ ಉಳಾಯಿಬೆಟ್ಟು ರವರಿಗೆ ತಹ್ಲೀಲ್ ಪಠಿಸಲಾಯಿತು. 

ಕಾರ್ಯಕ್ರಮದಲ್ಲಿ ಮನಾರುಲ್‍ಹುದಾ ಮಸೀದಿಯ ಇಮಾಮ್  ಅಬ್ದುಲ್ ರಹಿಮಾನ್ ದಾರಿಮಿಯವರು ಪವಿತ್ರ ಉಮ್ರಾ ತೆರಳುತ್ತಿರುವ ಉದ್ದೇಶ ಈಡೇರಿಕೆಗಾಗಿ ಪ್ರಾರ್ಥಿಸಿದರು. 

ಈ ವೇಳೆ  ಸಮಸ್ತ ಮದ್ರಸ ಮ್ಯಾನೇಜ್‍ಮೆಂಟ್ ದೇರಳಕಟ್ಟೆ ರೇಂಜ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ  ಅಬೂಬಕ್ಕರ್ ಹಾಜಿ ನಾಟೆಕಲ್, ಪ್ರಧಾನ ಕಾರ್ಯದರ್ಶಿ ಸಿ.ಎಂ.ಶರೀಫ್ ಪಟ್ಟೋರಿ ಹಾಗೂ ಖಜಾಂಜಿ ಮುಹಮ್ಮದ್ ಮೋನು ಇನೋಳಿ ಇವರಿಗೆ ಶಾಲು ಹೊದಿಸಿ, ಗೌರವ ಸ್ಮರಣಿಕೆ ನೀಡಿ ಶುಭ ಹಾರೈಸಲಾಯಿತು.

ಸಮಾರಂಭದಲ್ಲಿ ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಇದರ ಖತೀಬ್  ಇಶಾಕ್ ಫೈಝಿ ಸಾಂದರ್ಭಿಕವಾಗಿ ಮಾತನಾಡಿದರು. 

ಕೆ.ಇ ಅಬ್ದುಲ್‍ಖಾದರ್ ರಝ್ವಿ ಸಾಲೆತ್ತೂರು, ಮನಾರುಲ್‍ಹುದಾ ಮಸೀದಿ ಅಧ್ಯಕ್ಷ ಸಯ್ಯದ್ ಅಲಿ, ಕಾರ್ಯದರ್ಶಿ ಅಶ್ರಫ್ ಮಂಚಿ, ವಾದಿತ್ತೈಬ ಕಿನ್ಯಾ ಇದರ ಕಾರ್ಯದರ್ಶಿ ಸಿರಾಜುದ್ದೀನ್ ಹಾಜಿ ತಾಜ್, ಅರ್ಶದ್ ಕುದ್ರೋಳಿ, ಬಿ.ಎಸ್.ಅಬ್ದುಲ್‍ಹಮೀದ್, ಅಬ್ದುಲ್‍ಖಾದರ್ ಜೋಕಟ್ಟೆ, ಅಬೂಬಕ್ಕರ್ ಎ.ಪಿ, ಶಮೀರ್ ಎಲ್ಯಾರ್, ರಹಮತ್ ಪಾಲ್ದಡಿ, ಇಶಾಕ್ ದೇರಳಕಟ್ಟೆ, ಜಮಾಲ್ ಪಾವೂರು, ಮುಹ್ಯಿದ್ದೀನ್ ಆಟೋ, ಆಶಿಕ್ ಕಿನ್ಯಾ ಉಪಸ್ಥಿತರಿದ್ದರು.

Similar News