×
Ad

ಆಟೋ, ಕಾರು ಢಿಕ್ಕಿ: ಅಕ್ಕ-ತಂಗಿ ಸಾವು, ಮೂವರಿಗೆ ಗಾಯ

Update: 2023-01-07 19:25 IST

ಬೆಂಗಳೂರು: ನಗರದಲ್ಲಿ ಆಟೋರಿಕ್ಷಾ, ಕಾರು ಢಿಕ್ಕಿ ಹೊಡೆದ ಪರಿಣಾಮ ಅಕ್ಕ-ತಂಗಿ ಮೃತಪಟ್ಟು ಇಬ್ಬರು ಮಕ್ಕಳು ಸೇರಿ ಮೂವರು ಗಾಯಗೊಂಡಿರುವ  ಘಟನೆ ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ನಡೆದಿದೆ.    

ಮೃತರನ್ನು ಆಟೋ ಚಾಲಕನ ಪತ್ನಿ ಹಸೀನಾ(38), ಅವರ ಅಕ್ಕ ಫಾಝಿಲಾ(40) ಎಂದು ಗುರುತಿಸಲಾಗಿದೆ. ಆಟೋ ಚಾಲಕ ಖಾಲಿದ್‍ ಖಾನ್(39) ಅವರ ಮಕ್ಕಳಾದ ಸುಮಯ್ಯ(5) ಹಾಗೂ ಸಾದಿಯಾ(3) ಗಾಯಗೊಂಡಿದ್ದು ಮೂವರು ಗಾಯಾಳುಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕೆ.ಆರ್.ಪುರಂನ ಹಳೆ ಮದ್ರಾಸ್ ರಸ್ತೆಯ ಮೇಡಹಳ್ಳಿ ಸ್ಕೈ ವಾಕ್ ಬಳಿ ಶುಕ್ರವಾರ ತಡರಾತ್ರಿ ಅತಿವೇಗವಾಗಿ ಬಂದ ಕಾರು ಆಟೋಗೆ ಢಿಕ್ಕಿ ಹೊಡೆದಿದೆ. ಇದರಿಂದ, ಆಟೋದಲ್ಲಿದ್ದ ಅಕ್ಕ-ತಂಗಿ ಮೃತಪಟ್ಟಿದ್ದಾರೆ. ಆಟೋ ಚಾಲಕ, ಅವರ ಮಕ್ಕಳು ಗಾಯಗೊಂಡಿದ್ದಾರೆ.  

ಗಾಯಗೊಂಡ ಮೂವರಲ್ಲಿ ಖಾಲಿದ್ ಖಾನ್ ಸ್ಥಿತಿ ಗಂಭೀರವಾಗಿದೆ ಎಂದು ಪೂರ್ವ ವಿಭಾಗದ ಸಂಚಾರ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

ಕೆ.ಆರ್.ಪುರಂನಿಂದ ಬಟ್ಟರಹಳ್ಳಿಯ ಮೇಡಹಳ್ಳಿಯ ಚನ್ನಸಂದ್ರಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದ್ದು, ಅಪಘಾತ ನಡೆಸಿದ ಕಾರು ನಾಪತ್ತೆಯಾಗಿದೆ.    

ಆಟೋದಲ್ಲಿ ಆಟೋ ಚಾಲಕ ಖಾಲಿದ್, ಪತ್ನಿ ಹಸೀನಾ, ಇಬ್ಬರು ಮಕ್ಕಳು, ಖಾಲಿದ್ ಸಹೋದರಿ ಫಾಝಿಲಾ ಪ್ರಯಾಣಿಸುತ್ತಿದ್ದು, ಈ ವೇಳೆ ಕಾರು ಢಿಕ್ಕಿಯಾಗಿ ತಾಸೀನಾ, ಫಾಝಿಲಾ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಮಕ್ಕಳು ಚಾಲಕ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದು ಕೆ.ಆರ್.ಪುರಂ ಸಂಚಾರ ಪೊಲೀಸರು ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ ಎಂದರು.  

Similar News