ಬೆಂಗಳೂರು: ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಆರು ಮಂದಿಗೆ ಇನ್ಫೊಸಿಸ್ ಪ್ರಶಸ್ತಿ ಪ್ರದಾನ
Update: 2023-01-07 23:33 IST
ಬೆಂಗಳೂರು: ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಇನ್ಫೊಸಿಸ್ ಸೈನ್ಸ್ ಫೌಂಡೇಷನ್ (ಐಎಸ್‍ಎಫ್) ಶನಿವಾರ ನಗರದಲ್ಲಿ ಇನ್ಫೊಸಿಸ್ ಪ್ರಶಸ್ತಿ 2022 ಪ್ರದಾನ ಮಾಡಲಾಯಿತು.
ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಸುಮನ್ ಚಕ್ರವರ್ತಿ, ಮಾನವಿಕ ವಿಭಾಗದಲ್ಲಿ ಸುಧೀರ್ ಕೃಷ್ಣಸ್ವಾಮಿ, ಜೀವ ವಿಜ್ಞಾನ ವಿಭಾಗದಲ್ಲಿ ವಿದಿತಾ ವೈದ್ಯ, ಗಣಿತ ವಿಜ್ಞಾನ ವಿಭಾಗದಲ್ಲಿ ಮಹೇಶ್ ಕಾಕಡೆ, ಭೌತ ವಿಜ್ಞಾನದಲ್ಲಿ ನಿಸ್ಸಿಂ ಕಾನೇಕರ್, ಸಮಾಜ ವಿಜ್ಞಾನ ವಿಭಾಗದಲ್ಲಿ ರೋಹಿಣಿ ಪಾಂಡೆ ಅವರಿಗೆ ಇನ್ಫೊಸಿಸ್ ಪ್ರಶಸ್ತಿ 2022 ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇನ್ಫೊಸಿಸ್ ಸೈನ್ಸ್ ಫೌಂಡೇಷನ್‍ನ ಟ್ರಸ್ಟಿ ಎಸ್. ಗೋಪಾಲಕೃಷ್ಣನ್, ನಾರಾಯಣ ಮೂರ್ತಿ, ಶ್ರೀನಾಥ್ ಬಾಟ್ನಿ, ಕೆ. ದಿನೇಶ್, ನಂದನ್ ನಿಲೇಕಣಿ, ಮೋಹನದಾಸ್ ಪೈ, ಸಲೀಲ್ ಪಾರೇಖ್ ಮತ್ತು ಎಸ್.ಡಿ. ಶಿಬುಲಾಲ್ ಹಾಜರಿದ್ದರು.