×
Ad

ಮಂಗಳೂರು| ಎಂ‌.ಸಿ.ಯಹ್ಯಾ ನಿಧನ

Update: 2023-01-08 12:44 IST

ಮಂಗಳೂರು, ಜ.8: ಮೂಲತಃ ಕಾಸರಗೋಡು-ಮೊಗ್ರಾಲ್‌ನ ಪ್ರಸಕ್ತ ಮಂಗಳೂರು ನಗರದಲ್ಲಿ ವಾಸ್ತವ್ಯವಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಎಂ.ಸಿ.ಯಹ್ಯಾ (77) ರವಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯನ್ನು ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು ನಗರದ ಹ್ಯಾಮಿಲ್ಟನ್ ಕಾಂಪ್ಲೆಕ್ಸ್ ಮತ್ತು ಸೀವ್ಯೂವ್ ಟೂರಿಸ್ಟ್ ಹೋಮ್‌ನಲ್ಲಿ ಪಾಲುದಾರಿಕೆ ಹೊಂದಿದ್ದರು.

ಮಂಗಳೂರಿನ ಬಂದರ್ ಕೇಂದ್ರ ಜುಮಾ ಮಸ್ಜಿದ್‌ನ ದಫನ ಭೂಮಿಯಲ್ಲಿ ರವಿವಾರ(ಜ.8) ಮಗ್ರಿಬ್ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

Similar News