ಸುಳ್ಯ | ಅಯ್ಯಪ್ಪ ಮಾಲಾಧಾರಿ ಬಾಲಕನನ್ನು ರಸ್ತೆ ದಾಟಿಸುತ್ತಿರುವ ವೃದ್ಧ: 'ಸೌಹಾರ್ದ'ದ ಹೆಸರಲ್ಲಿ ಫೋಟೋ ವೈರಲ್
Update: 2023-01-08 16:02 IST
ಸುಳ್ಯ, ಜ.8: ಇಲ್ಲಿನ ಕಲ್ಲುಗುಂಡಿಯಲ್ಲಿಂದು ಅಯ್ಯಪ್ಪ ಮಾಲಾಧಾರಿ ಬಾಲಕನೊಬ್ಬನನ್ನು ವೃದ್ಧರೋರ್ವರು ಕೈ ಹಿಡಿದು ರಸ್ತೆ ದಾಟಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಲ್ಲುಗುಂಡಿ ಸಮೀಪ ಇಂದು ಬೆಳಗ್ಗೆ ಅಯ್ಯಪ್ಪ ಮಾಲಾಧಾರಿಯಾದ ಸೋನು ಎಂಬ ಬಾಲಕ ವಾಹನ ಸಂಚಾರವಿದ್ದ ರಸ್ತೆ ದಾಟಲು ಕಷ್ಟಪಡುತ್ತಿದ್ದ. ಇದನ್ನು ಗಮನಿಸಿದ ಪರಿಚಿತರಾದ ಇಬ್ರಾಹೀಂ ಮೈಲಿಕಲ್ಲು ಎಂಬವರು ಬಾಲಕನನ್ನು ಸಮೀಪದ ಹಣ್ಣಿನ ಅಂಗಡಿ ಕರೆದೊಯ್ದು ಹಣ್ಣು ನೀಡಿ ಉಪಚರಿಸಿ ರಸ್ತೆ ದಾಟಿಸಿ ಬಿಟ್ಟಿದ್ದಾರೆ. ಈ ವೇಳೆ ಯಾರೋ ಕ್ಕಿಕ್ಕಿಸಿದ ಫೋಟೋವೊಂದು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 'ಸೌಹಾರ್ದ ಸಾರುವ ಚಿತ್ರ' ಎಂಬ ಅಡಿಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.