×
Ad

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಸಿಸಿಟಿವಿಯಲ್ಲಿ ಕೃತ್ಯ ಸೆರೆ

Update: 2023-01-08 19:42 IST

ಬೆಂಗಳೂರು, ಜ.8: ಮನೆ ಮುಂದೆ ನಿಲ್ಲಿಸಿದ್ದ ಲಕ್ಷಾಂತರ ರೂ.ಮೌಲ್ಯದ ಕಾರಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.  

ಕಿಡಿಗೇಡಿಗಳ ದುಷ್ಕøತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುರುಬರಹಳ್ಳಿಯ ಕಾವೇರಿ ನಗರದಲ್ಲಿ ವಾಸವಾಗಿರುವ ಸುಬ್ರಮಣ್ಯ ಎಂಬುವರ ಕಾರಿನ ಜತೆ ಒಂದು ದ್ವಿಚಕ್ರ ವಾಹನ ಸಹ ಸುಟ್ಟು ಕರಕಲಾಗಿದೆ. ಈ ಘಟನೆ ರವಿವಾರ ತಡರಾತ್ರಿ ನಡೆದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. 

ಈ ಸಂಬಂಧ ಸುಬ್ರಮಣ್ಯ ಸಹೋದರ ನೀಡಿದ ದೂರಿನ ಮೇರೆಗೆ ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಲ್ಮೆಟ್ ಧರಿಸಿಕೊಂಡು ಬಂದ ಕಿಡಿಗೇಡಿಗಳಿಬ್ಬರು ನೀರಿನ ಬಾಟೆಲ್‍ನಲ್ಲಿ ತಂದಿದ್ದ ಪೆಟ್ರೋಲ್‍ನ್ನು ಕಾರಿನ ಮೇಲೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿ ಹೊತ್ತಿಕೊಂಡು ಕಾರು ಹೊತ್ತಿ ಉರಿದಿದೆ. ಬೆಂಕಿಯ ಜ್ಚಾಲೆಗೆ ಪಕ್ಕದಲ್ಲಿದ್ದ ಬೈಕ್ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

Similar News